Thursday, May 16, 2024
spot_imgspot_img
spot_imgspot_img

ಜೆಸಿಐ ವಿಟ್ಲ ಘಟಕದಿಂದ ಪೋಕ್ಸೋ ಕಾಯ್ದೆ, ಮಾದಕ ವಸ್ತುಗಳ ವಿರೋಧಿ ಜಾಗೃತಿ ಹಾಗೂ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಮಾಹಿತಿ ಕಾರ್ಯಕ್ರಮ

- Advertisement -G L Acharya panikkar
- Advertisement -

ಜೆಸಿಐ ಸಪ್ತಾಹ 2023ರ ಮೂರನೇ ದಿನದ ಕಾರ್ಯಕ್ರಮದ ಪ್ರಯುಕ್ತ ಜೆಸಿಐ ವಿಟ್ಲ ಘಟಕದಿಂದ ವಿಟ್ಲ ಜೆಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗ ಪೋಕ್ಸೋ ಕಾಯ್ದೆ, ಮಾದಕ ವಸ್ತುಗಳ ವಿರೋಧಿ ಜಾಗೃತಿ ಹಾಗೂ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಕುರಿತ ಮಾಹಿತಿ ಕಾರ್ಯಕ್ರಮ ನಡೆಯಿತು.

ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ನಾಗರಾಜ ಯಚ್. ಇ ಕಾರ್ಯಕ್ರಮ ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಘಟಕಾಧ್ಯಕ್ಷರಾದ ಜೆಸಿ ಪರಮೇಶ್ವರ ಹೆಗಡೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಘಟಕದ
ಪೂರ್ವಾಧ್ಯಕ್ಷರುಗಳಾದ ಜೇಸಿ ಶ್ರೀಧರ್ ಶೆಟ್ಟಿ ಹಾಗೂ ಜೇಸಿ ಪ್ರಕಾಶ್ ರವರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಘಟಕದ ಪೂರ್ವಾಧ್ಯಕ್ಷರುಗಳಾದ ಜೇಸಿ ಶ್ರೀಧರ್ ಶೆಟ್ಟಿ ಹಾಗೂ ಜೇಸಿ ಪ್ರಕಾಶ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವಿಟ್ಲ ಜೆಸಿಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲದ ಪ್ರಾಂಶುಪಾಲರಾದ ಜಯರಾಮ ರೈ ಸೇರಿದಂತೆ ಜೆಸಿಐ ವಿಟ್ಲ ಘಟಕದ ಪೂರ್ವಾಧ್ಯಕ್ಷರು, ಸದಸ್ಯರು, ಶಾಲೆಯ ಆಡಳಿತ ಮಂಡಳಿಯ ನಿರ್ದೇಶಕರು,ಶಿಕ್ಷಕ ವೃಂದದವರು ಭಾಗವಹಿಸಿದ್ದರು.

ಸುಮಾರು 300 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿ ಮಾಹಿತಿಯ ಸದುಪಯೋಗ ಪಡೆದುಕೊಂಡರು.

- Advertisement -

Related news

error: Content is protected !!