Thursday, April 25, 2024
spot_imgspot_img
spot_imgspot_img

ಉತ್ತರ ಪ್ರದೇಶ: ಮತಾಂತರ ಕಾಯಿದೆ ಅನ್ವಯ ಅಂತರ್’ಧರ್ಮೀಯ ಮದುವೆ ನಿಲ್ಲಿಸಿದ ಪೊಲೀಸರು

- Advertisement -G L Acharya panikkar
- Advertisement -

ಉತ್ತರ ಪ್ರದೇಶ: ಕಾನೂನು ಬಾಹಿರವಾಗಿ ಮತಾಂತರ ಮಾಡುವುದನ್ನು ನಿಲ್ಲಿಸಲು ಉತ್ತರ ಪ್ರದೇಶ ಸರಕಾರ ಕಾನೂನು ಜಾರಿಗೆ ತಂದ ಒಂದು ವಾರದ ನಂತರ ಇದೀಗ ಅಂತರ್’ಧರ್ಮೀಯ ಮದುವೆಯೊಂದನ್ನು ಪೊಲೀಸರು ತಪ್ಪಿಸಿದ್ದಾರೆ.

ಹಿಂದು ಯುವತಿ ಮತ್ತು ಮುಸ್ಲಿಂ ಯುವಕನ ನಡುವೆ ಮದುವೆ ನಡೆಯಬೇಕೆಂಬಷ್ಟರಲ್ಲಿ ಆಗಮಿಸಿದ ಪೊಲೀಸರು ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಇಬ್ಬರಿಗೂ ಮದುವೆಯಾಗುವ ಮುನ್ನ ಲಕ್ನೊ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಳಿ ಕ್ಲಿಯರೆನ್ಸ್ ಪಡೆಯಲು ತಿಳಿಸಿದ್ದಾರೆಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಮದುವೆ ಎರಡು ಕುಟುಂಬದ ಒಪ್ಪಿಗೆಯೊಂದಿಗೆ ನಡೆಯುತ್ತಿದ್ದು ಇದರಲ್ಲಿ ಯಾವುದೇ ಬಲವಂತ ಇರಲಿಲ್ಲವೆಂದು ಕುಟುಂಬ ಮೂಲಗಳು ಸ್ಪಷ್ಟ ಪಡಿಸಿರುವ ಬಗ್ಗೆ ವರದಿಯಾಗಿದೆ.

ಸುಗ್ರೀವಾಜ್ಞೆಯ ಪ್ರಕಾರ, ಬಲವಂತದ ಮತಾಂತರ (ಅಥವಾ ವಂಚನೆಯ ಮೂಲಕ ಪರಿವರ್ತನೆ) ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ₹ 15,000 ದಂಡ ವಿಧಿಸಲಾಗುತ್ತದೆ. ಬಲವಂತದ ಮತಾಂತರವು ಹಿಂದುಳಿದ ಸಮುದಾಯಗಳ ಮಹಿಳೆಯನ್ನು ಒಳಗೊಂಡಿದ್ದರೆ ಇದು ಮೂರು ಮತ್ತು 10 ವರ್ಷಗಳ ಜೈಲು ಮತ್ತು ₹ 25,000 ದಂಡವನ್ನು ಒಳಗೊಂಡಿದೆ. ಸಾಮೂಹಿಕ ಮತಾಂತರವು ಇದೇ ರೀತಿಯ ಜೈಲು ಶಿಕ್ಷೆ ಮತ್ತು ₹ 50,000 ದಂಡವನ್ನು ವಿಧಿಸಲಾಗುತ್ತದೆ.

- Advertisement -

Related news

error: Content is protected !!