Monday, July 27, 2026
spot_imgspot_img
spot_imgspot_img

ಅಂತಾರಾಷ್ಟ್ರೀಯ ಪ್ರಯಾಣದ ಮೂಲಕ ಮಂಗಳೂರಿಗೆ ಬರುವ ಅನಿವಾಸಿ ಭಾರತೀಯರು ಏರ್​ ಸುವಿಧಾ ಮೂಲಕ ಅರ್ಜಿ ಸಲ್ಲಿಸಿ.

- Advertisement -
- Advertisement -

ಮಂಗಳೂರು: ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಅಂತಾರಾಷ್ಟ್ರೀಯ ಪ್ರಯಾಣದ ಮೂಲಕ ಮಂಗಳೂರಿಗೆ ಬರುವ ಅನಿವಾಸಿ ಭಾರತೀಯರು ಏರ್ ಸುವಿಧಾ ಅರ್ಜಿಯನ್ನು (https://www.newdelhiairport.in/airsuvidha/APHO-registration) ವಿಮಾನ ನಿಲ್ದಾಣ ತಲುಪುವ ಮೊದಲು ಭರ್ತಿ ಮಾಡಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಅಲ್ಲದೆ ಅಂತಾರಾಷ್ಟ್ರೀಯ ವಿಮಾನ ಯಾನ ಮಾಡುವವರು ಅವರ ಮೊಬೈಲ್ ನಲ್ಲಿ ಆರೋಗ್ಯ ಸೇತು, ಕ್ವಾರೆಂಟೈನ್ ವಾಚ್, ಆಪ್ತಮಿತ್ರ ಆ್ಯಪ್ ಕಡ್ಡಾಯ ಡೌನ್ಲೋಡ್ ಮಾಡಬೇಕು. ಜೊತೆಗೆ ಈಗಾಗಲೇ ಆ್ಯಕ್ಟಿವ್ ಇರುವ ಭಾರತದ ಸಿಮ್ ಇರಬೇಕು.ಪ್ರಯಾಣಿಕರು ಮಂಗಳೂರು ತಲುಪುವ ಮೊದಲು ತಮ್ಮ ಕುಟುಂಬ ಸದಸ್ಯರ ನೆರವಿನಿಂದ ಸಿಮ್ ಆ್ಯಕ್ಟಿವೇಟ್ ಮಾಡಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಆದೇಶಿಸಿದೆ.

- Advertisement -

Related news

error: Content is protected !!