



ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವಿಟ್ಲಾ,ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಬಂಟ್ವಾಳ ಇವರ ಅಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕುಲಾಲ ರಜತ ಭವನ ಸಭಾಂಗಣ ವಿಟ್ಲಾ ದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವಿಟ್ಲಾ ಪಟ್ಟಣ ಪಂಚಾಯತ್ ಅಧ್ಯಕ್ಷರು ಶ್ರೀಯುತ ಕರುಣಾಕರ ಗೌಡ ಇವರು ನೆರವೇರಿಸಿಕೊಟ್ಟರು, ಒಂದು ಕಾಲದಲ್ಲಿ ಮಹಿಳೆ ತನ್ನ ಮಕ್ಕಳ ಪಾಲನೆ ಪೋಷಣೆ ಮಾಡುತ್ತಾ 4 ಗೋಡೆಗಳ ಮಧ್ಯ ಸಂಸಾರ ನಿರ್ವಹಣೆ ಮಾಡುತ್ತ ಇರಬೇಕಾದ ಕಾಲವಾಗಿತ್ತು, ಆದರೆ ಈಗ ಕಾಲ ಬದಲಾಗಿದೆ ಅದೆಷ್ಟೋ ಮಹಿಳೆಯರು ಪ್ರತೀ ಒಂದು ಕ್ಷೇತ್ರದಲ್ಲಿ ಅಮೋಘ ಸಾಧನೆಗಳ ಮೂಲಕ ದಿಟ್ಟ ಹೆಜ್ಜೆಯನ್ನಿಡುತ್ತಾ ಸಂತೃಪ್ತಿ ಯ ಜೀವನ ನಡೆಸುತ್ತಿದ್ದಾರೆ, ಆದರೂ ಕೆಲವು ಕಡೆ ದೌರ್ಜನ್ಯ, ಅನ್ಯಾಯ ಹಿಂಸೆ ಅತ್ಯಾಚಾರ, ಮೋಸದ ಜಾಲಗಳಿಗೆ ಬಲಿ ಯಾಗುತ್ತಿರುವ ಹಲವಾರು ನಿದರ್ಶನಗಳನ್ನು ಪ್ರತೀ ದಿನ ನೋಡುತ್ತಿದ್ದೇವೆ, ಮಹಿಳಾ ಸಬಲೀಕರಣ, ದೌರ್ಜನ್ಯ ಗಳಿಂದ ಮುಕ್ತಿ ಮೊದಲಾದ ವಿಷಯ ಗಳ ಬಗ್ಗೆ ಚಿಂತನೆ ನಡೆಸಬೇಕಾದ ದಿನವೇ ಅರ್ಥಪೂರ್ಣವಾದ ಮಹಿಳಾ ದಿನಾಚರಣೆ ಎಂದು ಅಭಿಪ್ರಾಯ ಪಟ್ಟರು.

ಪ್ರತೀ ಒಬ್ಬ ಯಶಸ್ವಿ ಪುರುಷನ ಹಿಂದೆ ಒಂದು ಸ್ತ್ರೀಯ ಸಹಾಯದ ಹಸ್ತ ಇದ್ದೆ ಇರುತ್ತದೆ, ಎಂದು ತಮ್ಮದೇ ಉದಾಹರಣೆಯೊಂದಿಗೆ
ವಿಟ್ಲಾ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರು ಶ್ರೀಯುತ ಅಶೋಕ್ ಕುಮಾರ್ ಶೆಟ್ಟಿ ಇವರು ಸಭೆಯಲ್ಲಿ ಎಲ್ಲರಿಗೂ ಶುಭ ಹಾರೈಸಿದರು. ಬೊನ್ಯ ಕುಕ್ಕು ಅಂಗನವಾಡಿ ಕೇಂದ್ರದ ಸೂರ್ಯ ಸ್ತ್ರೀ ಶಕ್ತಿ ಗುಂಪಿಗೆ ತಾಲೂಕು ಮಟ್ಟದ ಉತ್ತಮ ಸ್ತ್ರೀಶಕ್ತಿ ಗುಂಪು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಅದೃಷ್ಟದಾಟ ಗಳನ್ನು ಆಡಿಸಿ ಬಹುಮಾನ ವಿತರಿಸಲಾಯಿತು ಮುಖ್ಯ ಅತಿಥಿ ಗಳಾಗಿ ಸಮುದಾಯ ಆರೋಗ್ಯ ಕೇಂದ್ರ ವಿಟ್ಲಾ ದ ವೈದ್ಯಧಿಕಾರಿ dr. ಜಯಪ್ರಕಾಶ್, ವಿಟ್ಲಾ ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ಶ್ರೀ ಕರುಣಾಕರ್, ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಶ್ರೀ ಮಜೀದ್ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕುಸುಮ, ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ H I ಕಾರ್ಯಕ್ರಮದ ಪ್ರಸ್ತಾವನೆಯೊಂದಿಗೆ ಸರ್ವರನ್ನೂ ಸ್ವಾಗತಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾರದಾ ಕೆ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕಿ ಜಲಜಾಕ್ಷಿ ಧನ್ಯವಾದ ಸಮರ್ಪಿಸಿ ದರು.ಅಂಗನವಾಡಿ ಕಾರ್ಯಕರ್ತೆಯರು ಸ್ತ್ರೀ ಶಕ್ತಿ ಸದಸ್ಯರು ಮೇಲ್ವಿಚಾರಕಿಯರು, ಕಚೇರಿ ಸಿಬ್ಬಂಧಿಗಳು ಹಾಜರಿದ್ದರು.









