Saturday, April 20, 2024
spot_imgspot_img
spot_imgspot_img

IPL 2021 ಪಂದ್ಯಾಟ: ಕಿಂಗ್ಸ್ ಇಲೆವೆನ್ ಪಂಜಾಬ್ Vs ಚೆನ್ನೈ ಸೂಪರ್ ಕಿಂಗ್ಸ್!

- Advertisement -G L Acharya panikkar
- Advertisement -

ಮುಂಬೈ: ಐಪಿಎಲ್ 14 ರ ಇಂದಿನ ಪಂದ್ಯದಲ್ಲಿ ಕನ್ನಡಿಗರೇ ನೇತೃತ್ವ ವಹಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದೆ.

ಐಪಿಎಲ್​ 2021 ಪಂದ್ಯ 8ರಲ್ಲಿ ಮೂರು ಬಾರಿ ಐಪಿಎಲ್ ಕಪ್​ ಗೆದ್ದಿರುವ ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ಪುಟಿದೆದ್ದಿರುವ ಪಂಜಾಬ್​ ಕಿಂಗ್ಸ್​ ತಂಡದ ವಿರುದ್ಧ ಮುಂಬೈನಲ್ಲಿ ಇಂದು ಕಾದಾಡಲಿದೆ. ಸಂಜು ಸ್ಯಾಮ್ಸನ್ ಅಮೋಘ ಆಟದಿಂದಾಗಿ ಪಂಜಾಬ್​ ಕಿಂಗ್ಸ್​ ಪ್ರಸಕ್ತ IPL 14 ಟೂರ್ನಿಯಲ್ಲಿ ಆತ್ಮವಿಶ್ವಾಸದ ಆರಂಭ ಪಡೆದಿದೆ. ಅದೇ ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ವಿರುದ್ಧ ಕಳಾಹೀನವಾಗಿ ಸೋತುಸುಣ್ಣವಾಗಿದೆ.

ಕಳೆದ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ರೋಚಕವಾಗಿ 4 ರನ್ ಗಳಿಂದ ಗೆದ್ದಿದ್ದ ಪಂಜಾಬ್ ಗೆ ಇಂದು ಮತ್ತೊಂದು ಜಯದ ನಿರೀಕ್ಷೆಯಿದೆ. ಅತ್ತ ಆರಂಭದಲ್ಲೇ ಸೋಲಿನ ಆಘಾತ ಅನುಭವಿಸಿರುವ ಚೆನ್ನೈಗೆ ಇಂದು ಗೆಲ್ಲುವ ಹಂಬಲ.

ಐಪಿಎಲ್ ಟೂರ್ನಿಯ​ 23 ಪಂದ್ಯಗಳಲ್ಲಿ ಚೆನ್ನೈ ತಂಡ 14 ಪಂದ್ಯಗಳನ್ನು ಗೆದ್ದಿದೆ. ಅದೇ ಪಂಜಾಬ್​ ಕಿಂಗ್​ಗಳು ಕೇವಲ 9 ಪಂದ್ಯಗಳ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.


ಪಂಜಾಬ್ ಗೆ ನಾಯಕ ಕೆಎಲ್ ರಾಹುಲ್, ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಬ್ಯಾಟಿಂಗ್ ಮೇಲೆ ಅಪಾರ ಭರವಸೆಯಿದೆ. ಒಂದು ವೇಳೆ ಚೆನ್ನೈ ಈ ಇಬ್ಬರ ವಿಕೆಟ್ ನ್ನು ಬೇಗನೇ ಪಡೆದುಕೊಂಡರೆ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದು. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವಾಂಖೇಡೆ ಸ್ಟೇಡಿಯಂನಲ್ಲಿನ ಪಿಚ್​ ಬ್ಯಾಟ್ಸ್​ನ್​ಗಳಿಗೆ ಸ್ವರ್ಗದಂತಿದೆ. ಕೆ.ಎಲ್.ರಾಹುಲ್​, ಕ್ರಿಸ್​ ಗೇಲ್, ಸಂಜು ಸ್ಯಾಮ್ಸನ್ ಮತ್ತು ಜೋ ಬಟ್ಲರ್​ ಅವರಂತಹ ಬಲಾಢ್ಯ ಬ್ಯಾಟ್ಸ್​ಮನ್​ಗಳು ನಿಜಕ್ಕೂ ಅದ್ಭುತ ಪ್ರದರ್ಶನ ನೀಡಬಲ್ಲರು. ಎರಡೂ ತಂಡಗಳಿಂದ ಉತ್ತಮ ಸ್ಕೋರ್​ ಬರುವ ಅಂದಾಜಿದೆಯಾದರೂ ಕೊನೆಗೆ ಯಾವ ತಂಡದ ಬೌಲರ್​ಗಳು ಹಿಡಿತ ಸಾಧಿಸುತ್ತಾರೋ ಆ ತಂಡವೇ ಜಯಭೇರಿ ಬಾರಿಸುವುದು.

- Advertisement -

Related news

error: Content is protected !!