Wednesday, April 24, 2024
spot_imgspot_img
spot_imgspot_img

ಕಿಂಗ್ಸ್​ ಇಲವೆನ್​ ಪಂಜಾಬ್​ ಹಾಗೂ ಮುಂಬೈ ಇಂಡಿಯನ್ಸ್​ ಇಂದು ಮುಖಾಮುಖಿ

- Advertisement -G L Acharya panikkar
- Advertisement -

ದುಬೈ: ಕಿಂಗ್ಸ್​ ಇಲವೆನ್​ ಪಂಜಾಬ್​ ಹಾಗೂ ಮುಂಬೈ ಇಂಡಿಯನ್ಸ್​ ಇಂದು ಮುಖಾಮುಖಿ ಆಗುತ್ತಿವೆ. ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ ಎರಡು ಸೋಲು ಕಂಡಿರುವ . ನಾಯಕ ಕೆಎಲ್​ ರಾಹುಲ್​ ಹಾಗೂ ಮಯಾಂಕ್​ ಅಗರ್​ವಾಲ್​ ಫಾರ್ಮ್​ನಲ್ಲಿರುವುದರಿಂದ ಪಂಜಾಬ್​ಗೆ ದೊಡ್ಡ ಬಲ ಸಿಕ್ಕಂತಾಗಿದೆ.

ಇನ್ನು, ಮುಂಬೈ ತಂಡದಲ್ಲಿ ಇಶನ್​ ಕಿಶನ್​ ಒಳ್ಳೆಯ ಫಾರ್ಮ್​ ಕಂಡುಕೊಂಡಿದ್ದು, ಇಂದು ಕೂಡ ಅವರು ಸಿಡಿಯುವ ಸಾಧ್ಯತೆ ಇದೆ. ಐದು ಕನ್ನಡಿಗರಿರುವ ಪಂಜಾಬ್​ ತಂಡ ಉತ್ತಮ ಪ್ರದರ್ಶನ ನೀಡುತ್ತಿರುವ ಹೊರತಾಗಿಯೂ ಸೋಲನ್ನು ಅನುಭವಿಸುತ್ತಿದೆ. ರಾಜಸ್ಥಾನ್​ ರಾಯಲ್ಸ್​ ವಿರುದ್ಧ 224 ರನ್​ ಸಿಡಿಸಿದ ಹೊರತಾಗಿಯೂ ಬೌಲಿಂಗ್​ನಲ್ಲಿ ಕಳಪೆ ಪ್ರದರ್ಶನ ನೀಡಿ ಸೋಲು ಕಂಡಿತ್ತು. ಹೀಗಾಗಿ, ಬೌಲಿಂಗ್​ ವಿಭಾಗವನ್ನು ಮತ್ತಷ್ಟು ಬಲಗೊಳಿಸಿ ಕಣಕ್ಕೆ ಇಳಿಯುವ ಅಗತ್ಯತೆ ಪಂಜಾಬ್​ಗೆ ಇದೆ.

ಮುಂಬೈ ತಂಡದ ನಾಯಕ ರೋಹಿತ್​ ಶರ್ಮಾ ಒಂದು ಪಂದ್ಯದಲ್ಲಿ ಉತ್ತಮವಾಗಿ ಆಡಿದರೆ ಮತ್ತೊಂದು ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ, ಅವರು ಉತ್ತಮವಾಗಿ ಆಡುವ ಅಗತ್ಯತೆ ಇದೆ.

- Advertisement -

Related news

error: Content is protected !!