- Advertisement -
- Advertisement -
ಕೊರೊನಾ ಹಿನ್ನೆಲೆಯಲ್ಲಿ ಬಿಸಿಸಿಐ, ಐಪಿಎಲ್- 2021 ಹಂಗಾಮವನ್ನ ಅರ್ಧಕ್ಕೆ ಮೊಟಕುಗೊಳಿಸಿ ಸಸ್ಪೆಂಡ್ ಮಾಡಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಮುಂದಿನ ಸೆಪ್ಟೆಂಬರ್ನಲ್ಲಿ ಪಂದ್ಯಗಳು ಪುನರಾರಂಭವಾಗುವ ಸಾಧ್ಯತೆ ಇದೆ. ಫೈನಲ್ ಪಂದ್ಯವು ಅಕ್ಟೋಬರ್ನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಮೇ 4 ರಂದು ಕೊರೊನಾ ಹಿನ್ನೆಲೆಯಲ್ಲಿ ಬಿಸಿಸಿಐ ಐಪಿಎಲ್ ಪಂದ್ಯಗಳನ್ನ ರದ್ದು ಮಾಡಿತ್ತು. ಇದೀಗ ಬಂದಿರುವ ಮಾಹಿತಿ ಪ್ರಕಾರ ಸೆಪ್ಟೆಂಬರ್ 19 ರಿಂದ ಐಪಿಎಲ್ ಪಂದ್ಯಗಳು ಮತ್ತೆ ಶುರುವಾಗುವ ಸಾಧ್ಯತೆ ಇದೆ. ಇನ್ನು ಫೈನಲ್ ಪಂದ್ಯ ಅಕ್ಟೋಬರ್ 10 ರಂದು ನಡೆಯಲಿದೆ ಎನ್ನಲಾಗಿದೆ.

ಇದರ ಮಧ್ಯದಲ್ಲಿ ಇಂಗ್ಲೆಂಡ್ ಹಾಗೂ ಭಾರತದ ತಂಡಗಳು ಮುಖಾಮುಖಿಯಾಗಲಿವೆ. ಸೆಪ್ಟೆಂಬರ್ 14 ರಂದು ಟೆಸ್ಟ್ ಪಂದ್ಯಗಳನ್ನ ಮುಗಿಸಿ, 15 ರಂದು ದುಬೈಗೆ ಐಪಿಎಲ್ ಆಟಗಾರರು ಪ್ರಯಾಣ ಮಾಡಲಿದ್ದಾರೆ. ಅಲ್ಲಿ ಮೂರು ದಿನ ಕ್ವಾರಂಟೀನ್ ಮಾಡಿಸಿ ಆಟಗಾರರನ್ನ ಮೈದಾನಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ


- Advertisement -








