


ಟೆಹ್ರಾನ್: ಅಮೆರಿಕದ ಒಬ್ಬ ಸೈನಿಕನನ್ನು ಕೊಂದರೆ 30,000 ಡಾಲರ್(ಅಂದಾಜು 28.63 ಲಕ್ಷ ರೂ.) ಬಹುಮಾನ ನೀಡಲಾಗುವುದು. ಮಹಿಳೆಯರು ಈ ಕೆಲಸ ಮಾಡಿದರೆ ಡಬಲ್ ಬಹುಮಾನ ಕೊಡಲಾಗುವುದು ಎಂದು ಇರಾನ್ ಘೋಷಿಸಿದೆ.
ಸೈನಿಕರನ್ನು ಸೆರೆಹಿಡಿಯುವವರಿಗೂ 30,000 ಡಾಲರ್ ಬಹುಮಾನ ನೀಡುವುದಾಗಿ ಇರಾನ್ ಸೇನಾ ಮುಖ್ಯಸ್ಥ ಅಮೀರ್ ಹಟಾಮಿ ಘೋಷಿಸಿದ್ದಾರೆ.
ಯಾರಾದರೂ ಆಕ್ರಮಣಕಾರಿ ಅಮೆರಿಕನ್ ಮಿಲಿಟರಿ ಸಿಬ್ಬಂದಿಯನ್ನು ಕೊಂದು ಅಥವಾ ಸೆರೆಹಿಡಿದು ಹಸ್ತಾಂತರಿಸಿದರೆ, ಅವರಿಗೆ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸೈನ್ಯದಿಂದ 30,000 ಡಾಲರ್ ಅಥವಾ 5 ಬಿಲಿಯನ್ ಟೋಮನ್‌ಗಳಿಗೆ ಸಮಾನವಾದ ಬಹುಮಾನ ಸಿಗುತ್ತದೆ ಎಂದು ಹಟಾಮಿ ತಿಳಿಸಿದ್ದಾರೆ. ಆದರೆ ಅಮೆರಿಕದ ಸೈನಿಕರ ಹತ್ಯೆ ಅಥವಾ ಸೆರೆಹಿಡಿಯುವಿಕೆ ಯಾವಾಗ ಅಥವಾ ಎಲ್ಲಿ ನಡೆಯುತ್ತದೆ ಎಂಬುದರ ವಿವರಗಳನ್ನು ಅವರು ನೀಡಿಲ್ಲ.
ಅಮೆರಿಕ ಸೈನಿಕರನ್ನು ಸದೆಬಡಿಯುವ ಧೈರ್ಯಶಾಲಿ ಇರಾನಿನ ಮಹಿಳೆಯರಿಗೆ ದುಪ್ಪಟ್ಟು ಬಹುಮಾನ ಸಿಗುತ್ತದೆ ಎಂದು ಬಹುಮಾನದ ಬಗ್ಗೆ ಮಾತನಾಡುತ್ತಾ ಹಟಾಮಿ ತಿಳಿಸಿದ್ದಾರೆ. ಅಮೆರಿಕದ ಸೈನಿಕನನ್ನು ಕೊಲ್ಲಲು ಬಳಸುವ ಆಯುಧವನ್ನು ದುಪ್ಪಟ್ಟು ಬೆಲೆಗೆ ಖರೀದಿಸಲಾಗುವುದು. ಆ ವ್ಯಕ್ತಿಗೆ ಹೊಸ ಆಯುಧವನ್ನು ನೀಡಲಾಗುವುದು. ವ್ಯಕ್ತಿಯ ಆಯುಧವನ್ನು ವಸ್ತುಸಂಗ್ರಹಾಲಯದಲ್ಲಿ ಇಡಲಾಗುವುದು ಎಂದು ಅವರು ಹೇಳಿರುವುದಾಗಿ ವರದಿ ಮೂಲಕ ತಿಳಿದುಬಂದಿದೆ.








