Thursday, June 18, 2026
spot_imgspot_img
spot_imgspot_img

ಇಸ್ರೇಲ್: ಮೂರು ಸುತ್ತಿನ ದಾಳಿ ನಡೆಸಿ ಇರಾನ್ ಮೇಲೆ ಸೇಡು ತೀರಿಸಿಕೊಂಡ ಇಸ್ರೇಲ್

- Advertisement -
- Advertisement -

ಇಸ್ರೇಲ್: ಹಿಜ್ಬುಲ್ಲಾ ಉಗ್ರರ ಮುಖ್ಯಸ್ಥರನ್ನು ನಾಶ ಮಾಡಿದ್ದಕ್ಕೆ ಪ್ರತಿಕಾರವಾಗಿ ಇಸ್ರೇಲ್ ಮೇಲೆ ಕ್ಷೀಪಣಿಗಳ ಮಳೆ ಸುರಿಸಿದ್ದ ಇರಾನ್ ಮೇಲೆ ಇಸ್ರೇಲ್ ಕರಾರುವಕ್ಕಾದ ದಾಳಿ ನಡೆಸಿದೆ. ಒಟ್ಟು ಮೂರು ಸುತ್ತಿನ ದಾಳಿಯಲ್ಲಿ ಇರಾನ್ ನ ಪ್ರಮುಖ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ.

ಇರಾನ್‌ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಕಾರವಾಗಿ, ಕಾರ್ಯಾಚರಣೆ ನಡೆಸುವುದಾಗಿ ಇಸ್ರೇಲ್ ಸೇನೆ ಇಂದು ಬೆಳಿಗ್ಗೆ ತಿಳಿಸಿತ್ತು. ತಿಂಗಳ ಪ್ರಾರಂಭದಲ್ಲಿ ಇರಾನ್ ನಡೆಸಿದ್ದ ಕ್ಷೀಪಣಿ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ. ಇರಾನ್ ಮೇಲೆ ಮೂರು ಸುತ್ತಿನ ದಾಳಿ ನಡೆಸಲಾಗಿದೆ. ಕ್ಷಿಪಣಿ, ಡೋನ್ ನೆಲೆಗಳು ಹಾಗೂ ತಯಾರಿಕಾ ಕೇಂದ್ರಗಳನ್ನು ಗುರಿಯಾಗಿಸಿ ಎರಡು ಹಾಗೂ ಮೂರನೇ ಸುತ್ತಿನ ದಾಳಿ ಸಂಘಟಿಸಲಾಗಿದೆ ಎಂದು ಯುಎಸ್ ಹಾಗೂ ಇಸ್ರೇಲ್ ಅಧಿಕಾರಿಗಳು ಬೆಳಿಗ್ಗೆಯೇ ತಿಳಿಸಿದ್ದರು. ಇದೀಗ, ಕಾರ್ಯಾಚರಣೆ ಮುಕ್ತಾಯಗೊಂಡಿರುವುದಾಗಿ ವರದಿಯಾಗಿದೆ.

- Advertisement -

Related news

error: Content is protected !!