Wednesday, May 8, 2024
spot_imgspot_img
spot_imgspot_img

ಭಾರತ-ಇಸ್ರೇಲ್​​ ಬಾಂಧವ್ಯ ಮತ್ತಷ್ಟು ಭದ್ರ

- Advertisement -G L Acharya panikkar
- Advertisement -

ಭಾರತ-ಇಸ್ರೇಲ್​​ ಸಂಬಂಧ ಮತ್ತೊಂದು ಹಂತಕ್ಕೇರಿದೆ. ಸೇನಾ ತಂತ್ರಜ್ಞಾನದಲ್ಲಿ ನೈಪುಣ್ಯತೆ ಹೊಂದಿರುವ ಇಸ್ರೇಲ್​​, ಇನ್ನುಮುಂದೆ ಯುದ್ಧ ಸಾಮಗ್ರಿಗಳ ತಯಾರಿಕೆಯಲ್ಲಿ ಭಾರತದೊಂದಿಗೆ ಕಾರ್ಯ ನಿರ್ವಹಿಸಲಿದೆ.

ಇಸ್ರೇಲ್​, ಭಾರತಕ್ಕೆ ಯುದ್ಧ ಸಾಮಗ್ರಿ ರಫ್ತು ಮಾಡುವ 4ನೇ ದೊಡ್ಡ ದೇಶ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಮಿತ್ರ ರಾಷ್ಟ್ರಗಳು ಜಂಟಿಯಾಗಿ ಕ್ಷಿಪಣಿ ಉಡಾವಣಾ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿವೆ.

ಅತ್ಯಾಧುನಿಕ ಬರಾಕ್​​-8 ಉಡಾವಣಾ ವ್ಯವಸ್ಥೆಗೆ ಇಸ್ರೇಲ್​​ನ ಕಂಪನಿಗಳು ಮೂರು ಕೇಂದ್ರಗಳಲ್ಲಿ ಭಾರತದ ಕಂಪನಿಗಳಿಗೆ ಸಾಥ್​​ ನೀಡಲಿದ್ದು, ಗಡಿಯಲ್ಲಿ ಹೆಚ್ಚಿನ ಭದ್ರತೆ ಸಲುವಾಗಿ 100 ಕಿಲ್ಲರ್​​ ಡ್ರೋನ್​​ಗಳು 3500 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗಲಿವೆ. ಯುದ್ಧದ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಲು ಬೆಂಕಿ ನಿರೋಧಕ ರಡಾರ್​ಗಳ​​ ಅಭಿವೃದ್ಧಿಗಾಗಿ 4,577 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಮತ್ತೆರೆಡು ಫಾಲ್ಕೋನ್​​ ಅವಾಕ್ಸ್​​ ಫೈಟರ್​​ ವಿಮಾನಗಳಿಗಾಗಿ ಕೂಡ ಒಪ್ಪಂದ ಮಾಡಿಕೊಳ್ಳಲಾಗಿದೆ. ಜೊತೆಗೆ ಌಂಟಿ ಏರ್​​ ಕ್ರಾಫ್ಟ್​​ ಕ್ಷಿಪಣಿಗಳು ಹಾಗೂ 2 ಸಾವಿರ ಸ್ಪೈಸ್​​ ಬಾಂಬ್​​ಗಳು ಕೂಡ ಭಾರತದ ಬತ್ತಳಿಕೆ ಸೇರಲಿವೆ.

- Advertisement -

Related news

error: Content is protected !!