Monday, June 15, 2026
spot_imgspot_img
spot_imgspot_img

ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್​ಗೆ ಐಟಿ ಶಾಕ್​; ಮನೆ, ಕಚೇರಿ ಮೇಲೆ ದಾಳಿ

- Advertisement -
- Advertisement -

ಬೆಂಗಳೂರು: ಕಾಂಗ್ರೆಸ್​ ಶಾಸಕ, ಮಾಜಿ ಸಚಿವ ಜಮೀರ್​ ಅಹ್ಮದ್​ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಕಂಟೋನ್ಮೆಂಟ್ ಬಳಿಯಿರೋ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಳಗ್ಗೆ 6 ಗಂಟೆ ವೇಳೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಜಮೀರ್ ಅವರ ನಿವಾಸ ಮಾತ್ರವಲ್ಲದೇ ಚಾಮರಾಜನಗರದಲ್ಲಿರೋ ಕಚೇರಿ, ಜಮೀರ್​ ಮಾಲೀಕತ್ವದ ನ್ಯಾಷನಲ್​ ಟ್ರಾವೆಲ್ಸ್​ ಹಾಗೂ ಫ್ಲ್ಯಾಟ್​ ಮೇಲೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಳೆದ ಎರಡು ಗಂಟೆಗಳಿಂದ ಐಟಿ ಅಧಿಕಾರಿಗಳು ನಿವಾಸ ಹಾಗೂ ಕಚೇರಿಯಲ್ಲಿರೋ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಜಮೀರ್ ವಿರುದ್ಧ ತೆರಿಗೆ ವಂಚನೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಕುಟುಂಬಸ್ಥರೆಲ್ಲರೂ ಮನೆಯಲ್ಲೇ ಇದ್ದರೂ ಎಂಬ ಮಾಹಿತಿ ಲಭ್ಯವಾಗಿದೆ. ಜಮೀರ್ ಅವರ ನಗರದಲ್ಲಿ ಮೂರು ನಿವಾಸಗಳನ್ನು ಹೊಂದಿದ್ದಾರೆ. ಮೂರು ನಿವಾಸಗಳ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಮೀರ್ ಅವರ ನಿವಾಸದ ಬಳಿ ಬೀಗಿ ಪೊಲೀಸ್​ ವ್ಯವಸ್ಥೆಯನ್ನು ಮಾಡಿದ್ದಾರೆ.

- Advertisement -

Related news

error: Content is protected !!