Thursday, April 25, 2024
spot_imgspot_img
spot_imgspot_img

ಜಮಾತ್ ಉದ್ ದವಾ ಉಗ್ರ ಸಂಘಟನೆ ವಕ್ತಾರನಿಗೆ 15 ವರ್ಷ ಜೈಲು!!

- Advertisement -G L Acharya panikkar
- Advertisement -

ಮುಂಬೈ: 2008ರ ಮುಂಬೈ ಉಗ್ರದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದವಾ (ಜೆಯುಡಿ) ಉಗ್ರ ಸಂಘಟನೆಯ ವಕ್ತಾರ ಯಹ್ಯಾ ಮುಜಾಹಿದ್​ಗೆ ಪಾಕಿಸ್ತಾನದ ಭಯೋತ್ಪಾದನ ನಿಗ್ರಹ ನ್ಯಾಯಾಲಯ (ಎಟಿಸಿ) 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆಭಯೋತ್ಪಾದನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಯಹ್ಯಾ ಮುಜಾಹಿದ್​​ಗೆ ಜೈಲು ಶಿಕ್ಷೆ ವಿಧಿಸಿದೆ.

ಕಳೆದ ಬುಧವಾರ ಲಾಹೋರ್​​ನ ಭಯೋತ್ಪಾದನ ನಿಗ್ರಹ ನ್ಯಾಯಾಲಯ 2 ಪ್ರಕರಣಗಳಲ್ಲಿ ಮುಜಾಹಿದ್​​ಗೆ ಒಟ್ಟು 32 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಜೊತೆಗೆ ಜಮಾತ್ ಉದ್ ದವಾ ಹಿರಿಯ ನಾಯಕ ಜಾಫರ್ ಇಕ್ಬಾಲ್​​ಗೆ 15 ವರ್ಷ ಹಾಗೂ ಹಫೀಜ್ ಸಯೀದ್ ಸಹೋದರ ಹಫೀಜ್ ಅಬ್ದುಲ್ ರೆಮಾನ್ ಮಕ್ಕಿಗೆ 6 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು.

ಇದಕ್ಕೂ ಮುನ್ನ 3 ಪ್ರತ್ಯೇಕ ಭಯೋತ್ಪಾದಕ ಪ್ರಕರಣಗಳಲ್ಲಿ ಲಾಹೋರ್ ನ್ಯಾಯಾಲಯ ಇಕ್ಬಾಲ್​​ಗೆ 26 ವರ್ಷಗಳ ಕಾಲ ಶಿಕ್ಷೆ ವಿಧಿಸಿತ್ತು. ಎಟಿಸಿ ನ್ಯಾಯಾಧೀಶ ಇಜಾಜ್ ಅಹ್ಮದ್ ಬುಟ್ಟರ್ ಅವರು ಭಯೋತ್ಪಾದನಾ ನಿಗ್ರಹ ಕಾಯ್ದೆ 1997ರ ವಿವಿಧ ನಿಬಂಧನೆಗಳ ಅಡಿಯಲ್ಲಿ ತೀರ್ಪು ಪ್ರಕಟಿಸಿದ್ದು ಈ ಸಂದರ್ಭದಲ್ಲಿ ಮೂವರು ಅಪರಾಧಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು.

ಪಂಜಾಬ್​​​ನ ಕೌಂಟರ್ ಟೆರರಿಸಂ ಡಿಪಾರ್ಟ್​ಮೆಂಟ್ ಪೊಲೀಸರು ಹಫೀಜ್ ಸಯೀದ್ ಸೇರಿದಂತೆ ಜಮಾತ್ ಉದ್ ದವಾ ಸಂಘಟನೆಯ ಹಲವು ನಾಯಕರ ವಿರುದ್ಧ ವಿವಿಧ ನಗರಗಳಲ್ಲಿ 41 ಎಫ್​​ಐಆರ್ ದಾಖಲಿಸಿದ್ದು, ಇದುವರೆಗೂ 25 ಪ್ರಕರಣಗಳಲ್ಲಿ ತೀರ್ಪು ಪ್ರಕಟವಾಗಿದೆ.

- Advertisement -

Related news

error: Content is protected !!