


ಜಾರ್ಖಂಡ್: ಪ್ರೀತಿಗಾಗಿ ತನ್ನ ಹೆತ್ತವರನ್ನೇ ಬಿಟ್ಟು ಬಂದಿದ್ದ ಮಹಿಳೆಯನ್ನು ಗರ್ಭಿಣಿ ಮಾಡಿದ್ದಲ್ಲದೇ ಗೋಲ್ಗಪ್ಪದಲ್ಲಿ ವಿಷ ಬೆರೆಸಿ ಕೊಲೆ ಮಾಡಲು ಯತ್ನಿಸಿದ ಅಮಾನವೀಯ ಘಟನೆ ಜಾರ್ಖಂಡ್ ನ ಗಢವಾ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ಸಾಕೇತ್ ಕೇಸರಿ (26), ತನ್ನ 23 ವರ್ಷದ ಮಹಿಳೆ ಕಳೆದ 6 ವರ್ಷಗಳಿಂದ ಸಂಬಂಧದಲ್ಲಿದ್ದರು. ಫೆ.21 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಕರೆ ಮಾಡಿ ಏನಾದರೂ ತಿನ್ನಬೇಕು ಅನಿಸ್ತಿದೆಯಾ ಎಂದು ಕೇಳಿದ್ದ. ಗೋಲ್ಗಪ್ಪ ತಿನ್ನುವ ಬಯಕೆಯನ್ನು ಆಕೆ ವ್ಯಕ್ತಪಡಿಸಿದ್ದಾಳೆ. ಆದರೆ ಆತ ಅದರಲ್ಲಿ ವಿಷ ಬೆರೆಸಿ ನೀಡಿದ್ದಾನೆ. ಇದನ್ನು ತಿಂದ ಮಹಿಳೆ ವಾಂತಿ ಮಾಡಿಕೊಂಡು ಬಾಯಿಯಲ್ಲಿ ರಕ್ತ ಬರಲಾರಂಭಿಸಿತ್ತು.
ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಆರೋಪಿಯು ಆಕೆಯನ್ನು ಬೈಕ್ನಲ್ಲಿ ಕಾಡಿಗೆ ಕರೆದೊಯ್ದು, ಅಲ್ಲಿ ಆಕೆಯ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾನೆ. ಇದರಿಂದ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಾಗ, ಆಕೆ ಸತ್ತಿದ್ದಾಳೆ ಎಂದು ಭಾವಿಸಿ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಪ್ರಜ್ಞೆ ಬಂದ ಬಳಿಕ ಮಹಿಳೆ ಇಡೀ ರಾತ್ರಿ ಕಾಡಿನಲ್ಲಿ ಅಡಗಿ ಕುಳಿತು, ಮರುದಿನ ಹೇಗೋ ಮಾಡಿ ತನ್ನ ಮನೆ ತಲುಪಿ ಮನೆಯವರಿಗೆ ವಿಷಯ ತಿಳಿಸಿದ್ದಾಳೆ ಎಂದು ತಿಳಿದುಬಂದಿದೆ.
ಒಂದು ವರ್ಷದ ಹಿಂದೆ ಇವರಿಗೆ ಮೊದಲ ಮಗು ಜನಿಸಿತ್ತು. ಮದುವೆಯಾಗುವ ಭರವಸೆ ನೀಡಿ ಮತ್ತೆ ಸಂಬಂಧ ಮುಂದುವರಿಸಿದ್ದ ಆರೋಪಿ, ಈ ಕೃತ್ಯ ಎಸಗಿದ್ದಾನೆ. ಸದ್ಯ ಪೊಲೀಸರು ಆರೋಪಿ ಸಾಕೇತ್ ಕೇಸರಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.








