Tuesday, July 28, 2026
spot_imgspot_img
spot_imgspot_img

ಮೊಬೈಲ್ ಇಂಟರ್’ನೆಟ್ ಡಾಟಾ ಖಾಲಿ ಮಾಡಿದ ಕಾರಣಕ್ಕೆ ತಮ್ಮನನ್ನೇ ಇರಿದು ಕೊಂದ ಅಣ್ಣ!!

- Advertisement -
- Advertisement -

ಜೋಧ್’ಪುರ: ಮೊಬೈಲ್ ಇಂಟರ್’ನೆಟ್ ಡಾಟಾ ಖಾಲಿ ಮಾಡಿದ ಎಂಬ ಕಾರಣಕ್ಕೆ ತಮ್ಮನನ್ನೇ ಇರಿದು ಕೊಂದಿದ್ದಾನೆ. ರಾಜಸ್ಥಾನದ ರಾಜಧಾನಿ ಜೋಧ್’ಪುರದಲ್ಲಿ ಈ ಘಟನೆ ನಡೆದಿದ್ದು ರಾಯ್(23) ಕೊಲೆಯಾದ ತಮ್ಮ.

ಅಣ್ಣ ರಾಮನ್ ನನ್ನು ಪೊಲೀಸರು ಬಂಧಿಸಿದ್ದಾರೆ.ರಾಮನ್ ತನ್ನ ಕಿರಿಯ ಸಹೋದರ ರಾಯ್’ನನ್ನು ಮನೆಯ ಟೆರೆಸ್ ಮೇಲೆ ಕರೆದೊಯ್ದು ಮೊಬೈಲ್ ಡಾಟಾ ಖಾಲಿ ಮಾಡಿದ್ದಕ್ಕಾಗಿ ಬೈದಿದ್ದಾನೆ.

ಈ ವೇಳೆ ಮಾತಿಗೆ ಮಾತು ಬೆಳೆದಿದ್ದು ಕ್ರೋಧದಿಂದ ಹರಿತವಾದ ಆಯುಧದಿಂದ ರಾಯ್ ನ ಎದೆಗೆ 4 ರಿಂದ 5 ಬಾರಿ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ರಾಯ್ ನೆಲಕ್ಕುರುಳಿದ್ದು ಈ ವೇಳೆ ರಾಮನ್ ಸ್ಥಳದಿಂದ ಪರಾರಿಯಾಗಿದ್ದಾನೆ.

ವಿಚಾರ ತಿಳಿದ ಪೋಷಕರು ಟೆರೇಸ್ ಮೇಲೆ ತೆರಳಿದಾಗ ರಾಯ್ ರಕ್ತದ ಮಡುವಿನಲ್ಲಿ ಬಿದ್ದಿದ್ದ ಕೂಡಲೇ ಆತನನ್ನು ಆಸ್ಪತ್ರೆ ದಾಖಲಿಸಲಾಯಿತಾದರೂ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ಪೊಲೀಸರು ರಾಮನ್ ನನ್ನು ಸ್ಥಳೀಯ ರೈಲ್ವೇ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಮೂಲಗಳ ಪ್ರಕಾರ ರಾಮನ್ ಮಾನಸಿಕ ಅಸ್ವಸ್ಥನಾಗಿದ್ದ.

- Advertisement -

Related news

error: Content is protected !!