Thursday, May 2, 2024
spot_imgspot_img
spot_imgspot_img

ಕಬಕ: ಶ್ರೀ ಮಹಾದೇವಿ ಯುವಕ ಮಂಡಲದ ಬೆಳ್ಳಿ ಹಬ್ಬ ಸಮಿತಿ ರಚನೆ ಮತ್ತು ಶ್ರೀ ಮಹಾದೇವಿ ಮಹಿಳಾ ಮಂಡಲದ ಪದಗ್ರಹಣ ಸಭೆ

- Advertisement -G L Acharya panikkar
- Advertisement -

ಕಬಕ: ಶ್ರೀ ಮಹಾದೇವಿ ಯುವಕ ಮಂಡಲದ ಬೆಳ್ಳಿ ಹಬ್ಬ ಸಮಿತಿ ರಚನೆ ಮತ್ತು ಶ್ರೀ ಮಹಾದೇವಿ ಮಹಿಳಾ ಮಂಡಲದ ಪದಗ್ರಹಣ ಸಭೆಯು ಕಬಕ ಶ್ರೀ ಮಹಾದೇವಿ ಕಲಾ ಮಂದಿರದಲ್ಲಿ ಜರಾಗಿತ್ತು.

ಬೆಳ್ಳಿ ಹಬ್ಬದ ಸಮಿತಿಯ ಅಧ್ಯಕ್ಷರಾಗಿ ವಿ.ಚಂದ್ರಶೇಖರ ನಾಯ್ಕ್, ಪ್ರಧಾನ ಕಾರ್ಯದರ್ಶಿ ಜಯರಾಮ್ ನೆಕ್ಕರೆ, ಉಪಾಧ್ಯಕ್ಷರಾಗಿ ಕರುಣಾಕರ ಗೌಡ ಅಡ್ಯಾಲು, ಬಾಲಕೃಷ್ಣ ಅನುಗ್ರಹ ಪೋಳ್ಯ, ಲತಾ ಕಬಕ, ಕಾರ್ಯದರ್ಶಿಯಾಗಿ ಜಗದೀಶ್ ಬಾಕಿಮಾರ್ ಹಾಗೂ ಬಿ. ಟಿ. ರಮೇಶ್ ಭಟ್, ಕೋಶಾಧಿಕಾರಿಯಾಗಿ ರಕ್ಷಿತ್ ಅಡ್ಯಾಲು ಹಾಗೂ ಯತೀಶ್ ಪದ್ನಡ್ಕ, ಕಟ್ಟಡ ನಿರ್ಮಾಣ ಸಮಿತಿ ಸಂಚಾಲಕರಾಗಿ ವಸಂತ್ ನೆಕ್ರಾಜೆ, ಸಹಸಂಚಾಲಕರಾಗಿ ಆನಂದ ಪೂಜಾರಿ ಅಡ್ಯಾಲು, ಆರ್ಥಿಕ ಸಮಿತಿ ಸಂಚಾಲಕರಾಗಿ ದಿನೇಶ್ ಶ್ರೀ ಶಾಂತಿ, ಸಹಾಸಂಚಾಲಕರಾಗಿ ಭೀಮ್ ಭಟ್ ಪದೆಂಜಾರು, ಕಾರ್ಯಕಾರಿಣಿ ಸದಸ್ಯರಾಗಿ ಆನಂದ ನೆಕ್ಕರೆ, ರವೀಂದ್ರ ಕಲ್ಲಂದಡ್ಕ, ಲೋಕೇಶ್ ಬಾಕಿಮಾರ್, ಸುಮಂತ್ ಅರ್ಕ, ಸತೀಶ್ ಕಬಕ, ಕೇಶವ ಕಲ್ಲಂದಡ್ಕ, ವಾಸುದೇವ ಆಚಾರ್ಯ ಸುಳ್ಯ, ಸುರೇಶ ಶ್ರೀ ಶಾಂತಿ, ಹೊನ್ನಪ್ಪ ವಿದ್ಯಾಪುರ, ಲೋಕಪ್ಪ ಕಳಮೆಮಜಲು, ಗೌರವ ಸಲಹೆಗರಾಗಿ ಸತೀಶ್ ರಾವ್, ಜತ್ತಪ್ಪ ಗೌಡ ಅಡ್ಯಾಲು, ಲೋಕೇಶ್ ಶೆಟ್ಟಿ ಕಲ್ಲಂದಡ್ಕ, ಪುರಷೋತ್ತಮ ಮುಂಗ್ಲಿಮನೆ, ಮೋನಪ್ಪ ಕಜೆ, ರವೀಂದ್ರ ಗೌಡ ಮುಂಗ್ಲಿಮನೆ ಹಾಗೂ ಶ್ರೀ ಮಹಿಳಾ ಮಂಡಳಿಯ ನೂತನ ಅಧ್ಯಕ್ಷರಾಗಿ ಭಾರತಿ ಕಬಕ ಬೈಲು ಕಾರ್ಯದರ್ಶಿಯಾಗಿ ರೇಷ್ಮಾ ನೆಕ್ಕರೆ ಆಯ್ಕೆಯಾಗಿದ್ದಾರೆ.

ಇವರಿಗೆ ನಿಕಟ ಪೂರ್ವ ಅಧ್ಯಕ್ಷರು ಮತ್ತು ಸಭಾ ಅಧ್ಯಕ್ಷರು ನೂತನ ಅಧ್ಯಕ್ಷ, ಕಾರ್ಯದರ್ಶಿಗಳಿಗೆ ಲೆಕ್ಕ ಪತ್ರದ ಪುಸ್ತಕವನ್ನು ಹಸ್ತಾಂತರಿಸಿದರು. ಶ್ರೀ ಮಹಾದೇವಿ ಯುವಕ ಮಂಡಲದ ಬೆಳ್ಳಿಹಬ್ಬ ಆಚರಣೆ ಮತ್ತು ನೂತನ ಯುವಕ /ಯುವತಿ ಮಂಡಲದ ಕಟ್ಟಡ ಉದ್ಘಾಟನೆ 2024 ಮೇ 10 ಮತ್ತು ಮೇ 11 ಎರಡು ದಿನಗಳ ಕಾಲ ವಿಜೃಂಭಣೆಯಿಂದ ಕಬಕದಲ್ಲಿ ಜರಗಲಿದೆ.

ಈ ಸಂದರ್ಭದಲ್ಲಿ ಕಬಕ ಗ್ರಾಮ ಪಂಚಾಯತ್ ಅಧ್ಯಕ್ಷರು ಸುಶೀಲ ನೆಕ್ಕರೆ, ಶ್ರೀ ಮಹಾದೇವಿ ಮಹಿಳಾ ಮಂಡಳಿಯ ನಿಕಟ ಪೂರ್ವ ಅಧ್ಯಕ್ಷರು ಲಲಿತಾ ವಿದ್ಯಾಪುರ, ಮಾಜಿ ಅಧ್ಯಕ್ಷರು ಮಲ್ಲಿಕಾ ಹೊಸಳಿಕೆ, ಲತಾ ಕಬಕ, ಸೌಮ್ಯ ಕಬಕ, ಉಮಾ ಕೋಟ್ಯಾನ್ ವಿದ್ಯಾಪುರ, ಪೂರ್ಣಿಮಾ ಆಚಾರ್ಯ ಕಬಕ, ವಿಮಲಾ ವಿದ್ಯಾಪುರ, ಸ್ನೇಹ ನೆಕ್ಕರೆ, ಪ್ರಕಾಶ್ ದೇವಸ್ಯ, ವಸಂತ್ ಗೌಡ ದೇವಸ್ಯ, ಸುಕುಮಾರ್ ಹೊಸಳಿಕೆ, ಸಂಜಯ ದೇವಸ್ಯ, ಜಯಪ್ರಕಾಶ್ ಕಜೆ, ಗಣೇಶ್ ಪದ್ನಡ್ಕ, ನಿಶಾಂತ್ ಆಚಾರ್ಯ ಕಬಕ, ಮಹೇಶ್ ಬೈಪಾದವು, ರಮೇಶ್ ಗೌಡ ದೇವಸ್ಯ, ಸುಕೇಶ್ ಅಡ್ಯಾಲು, ದಾಮೋದರ ನೆಕ್ಕರೆ, ಅಜೇಯ್ ಅಡ್ಯಾಲು, ಸುಂದರ್ ಕಲ್ಲಂದಡ್ಕ, ಮನೋಹರ ವಿದ್ಯಾಪುರ, ನಾಗೇಶ್ ಕರ್ಗಲ್ಲು, ಶೋಭಿತ್ ಕಳಮೆಮಜಲು, ನಾಗೇಶ್ ಪದೆಂಜಾರು, ಪ್ರಶಾಂತ್ ಕಳಮೆಮಜಲು ಉಪಸ್ಥಿತರಿದ್ದರು. ಈ ಸಭೆಯನ್ನು ಸಂಜಯ ದೇವಸ್ಯ ನಿರೂಪಿಸಿ, ರಕ್ಷಿತ್ ಅಡ್ಯಾಲು ಸ್ವಾಗತಿಸಿದರು. ಯತೀಶ್ ಪದ್ನಡ್ಕ ವಂದಿಸಿದರು.

- Advertisement -

Related news

error: Content is protected !!