Wednesday, April 23, 2025
spot_imgspot_img
spot_imgspot_img

ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ; ಆರೋಪಿಗೆ 37 ವರ್ಷ ಜೈಲು ಶಿಕ್ಷೆ; 7.5 ಲ.ರೂ ದಂಡ

- Advertisement -
- Advertisement -

ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜೀವಾವಧಿ ಕಠಿನ ಸಜೆ, ಅದರೊಂದಿಗೆ 37 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 7.5 ಲ.ರೂ ದಂಡ ವಿಧಿಸಿ ಕಾಸರಗೋಡು ಫಾಸ್ಟ್ ಟ್ರ‍್ಯಾಕ್ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಮೀಯಪದವು ಮೂಡಂಬೈಲು ಕುಳವಯಲ್ ನಿವಾಸಿ ವಲ್ಲಿ ಡಿ’ಸೋಜಾ(47)ನಿಗೆ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.

ಆರೋಪಿ ವಲ್ಲಿ ಡಿ’ಸೋಜಾ ಒಂದು ವೇಳೆ ದಂಡ ಪಾವತಿಸದಿದ್ದಲ್ಲಿ 28 ತಿಂಗಳು ಹೆಚ್ಚುವರಿ ಕಠಿನ ಸಜೆ ಅನುಭವಿಸುವಂತೆ ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.

2020 ಮಾರ್ಚ್ ತಿಂಗಳಲ್ಲಿ ಪ್ರಕರಣ ನಡೆದಿದ್ದು, ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದರು. ವಲ್ಲಿ ಡಿ’ಸೋಜಾ 16ರ ಹರೆಯದ ಬಾಲಕಿಯನ್ನು ಕಾರಿನಲ್ಲಿ ಕುಳೂರು ಮೀಯಪದವು ಪಾಲಡಿಯ ಜನವಾಸವಿಲ್ಲದ ಮನೆಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಆರೋಪಿಯ ವಿರುದ್ಧ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗ ದೌರ್ಜನ್ಯ ನಿಷೇಧ ಕಾನೂನು ಪ್ರಕಾರ ಕಾಯ್ದೆಯಡಿ ಶಿಕ್ಷೆ ವಿಧಿಸಲಾಗಿದೆ.

- Advertisement -

Related news

error: Content is protected !!