Tuesday, June 9, 2026
spot_imgspot_img
spot_imgspot_img

ಕಬಕ: ಕಲ್ಲಂದಡ್ಕ, ಸುಲ್ತಾನ್ ನಗರ ಎಂಬಲ್ಲಿ ಭಾರಿ ಅಕ್ರಮ ಗಣಿಗಾರಿಕೆ

- Advertisement -
- Advertisement -

ಕಂದಾಯ ಅಧಿಕಾರಿಗಳು, ಪೊಲೀಸರಿಂದ ದಾಳಿ.. ಕಂಪ್ರೆಸರ್, ಹಿಟಾಚಿ ಮುಟ್ಟುಗೋಲು…!

ಕಬಕ: ಕುಳ ಗ್ರಾಮದ ಕಲ್ಲಂದಡ್ಕ ಸುಲ್ತಾನ್ ನಗರ ಎಂಬಲ್ಲಿ ಭಾರಿ ಅಕ್ರಮ ಗಣಿಗಾರಿಕೆ ನಡೆಯುತ್ತದ್ದ ಖಚಿತ ಮಾಹಿತಿಯ ಮೇರೆಗೆ ಕಂದಾಯ ಅಧಿಕಾರಿಗಳು ಮತ್ತು ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದಾರೆ.

ಭಾರಿ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದಿಂದ ಕಂಪ್ರೆಸರ್, ಹಿಟಾಚಿ, ಬ್ರೇಕರ್ ಸಹಿತ ಯಂತ್ರೋಪಕರಣಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ಮುಟ್ಟುಗೋಲು ಹಾಕಿದ್ದಾರೆ.

ಕೃಷಿ ಉದ್ದೇಶಕ್ಕಾಗಿ ಸರ್ಕಾರಿ ಜಮೀನನ್ನು ಅಕ್ರಮ ಸಕ್ರಮ ಮೂಲಕ ಮಂಜೂರಾತಿ ಮಾಡಿಸಿಕೊಂಡು ಆ ಬಳಿಕ ಸೈಟ್ ಆಗಿ ಪರಿವರ್ತಿಸಿ ಮಾರಾಟ ಮಾಡುವ ಉದ್ದೇಶದಿಂದ ಫಾರೂಕ್ ಎಂಬವರು ಯಾವುದೇ ಅನುಮತಿ ಇಲ್ಲದೆ ಅಕ್ರಮ ಗಣಿಗಾರಿಕೆ ನಡೆಸಿ ಕಂದಾಯ ಇಲಾಖೆಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!