Thursday, September 10, 2026
spot_imgspot_img
spot_imgspot_img

ಕಡಬ: ಅವೈಜ್ಞಾನಿಕ ಹಂಪ್ ನಿಂದಾಗಿ ಬೈಕ್ ಸ್ಕಿಡ್- ಮಹಿಳೆ ಮೃತ್ಯು!

- Advertisement -
- Advertisement -

ಕಡಬ: ಅವೈಜ್ಞಾನಿಕವಾಗಿ ಅಳವಡಿಸಲಾಗಿರುವ ಹಂಪ್ ನಿಂದಾಗ ಮಹಿಳೆಯೋರ್ವರು ಮೃತಪಟ್ಟ ಘಟನೆ ಹೊಸ್ಮಠ ನೂತನ ಸೇತುವೆಯ ಬಳಿ ನಡೆದಿದೆ.

ಮೃತ ಮಹಿಳೆಯನ್ನು ವೇಣೂರಿನ ಬಜಾಲು ಸಮೀಪದ ವಿರಂದಲೆ ನಿವಾಸಿ ವೆಂಕಪ್ಪ ಸಾಲ್ಯಾನ್ ಎಂಬವರ ಪತ್ನಿ ಸುಂದರಿ(65) ಎಂದು ಗುರುತಿಸಲಾಗಿದೆ.

ಮೃತ‌ ಮಹಿಳೆಯು ತನ್ನ ಮೊಮ್ಮಗನೊಂದಿಗೆ ಭಾನುವಾರ ಬೆಳಗಿನ ಜಾವ ವೇಣೂರಿನಿಂದ ಕಡಬಕ್ಕೆಂದು ಹೊರಟಿದ್ದು, ಬೆಳಿಗ್ಗೆ 6.30ರ ಸುಮಾರಿಗೆ ಮಂಜು ಆವರಿಸಿದ್ದರಿಂದ ಹಂಪ್ ಗೋಚರಿಸದೆ ಚಲಿಸಿದ್ದರಿಂದ ಬೈಕ್ ಸ್ಕಿಡ್ ಆಗಿದ್ದು, ರಸ್ತೆಗೆಸೆಯಲ್ಪಟ್ಟ ಸುಂದರಿಯವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ‌ ಎನ್ನಲಾಗಿದೆ. ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ.

ಹೊಸ್ಮಠ ಸೇತುವೆಯ ಒಂದು ಬದಿ ದೊಡ್ಡದಾದ ಹಂಪ್ಸ್ ಹಾಕಿದ್ದು, ಸರಿಯಾದ ಸೂಚನ ಫಲಕವಿಲ್ಲದೆ ಗೋಚರಿಸುವುದೇ ಕಷ್ಟವಾಗಿದೆ.

- Advertisement -

Related news

error: Content is protected !!