Saturday, July 25, 2026
spot_imgspot_img
spot_imgspot_img

ಕಡಬ: ನಾಪತ್ತೆಯಾಗಿದ್ದ ಆಲಂಕಾರು ನಿವಾಸಿ ಪತ್ತೆ!

- Advertisement -
- Advertisement -

ಕಡಬ: ಕಡಬ ತಾಲೂಕು ಆಲಂಕಾರು ಗ್ರಾಮದ ಪಜ್ಜಡ್ಕ ನಿವಾಸಿ ದಿವಂಗತ ಶೇಸಪ್ಪ ಗೌಡರವರ ಪುತ್ರ ಗಣೇಶ್ ಪ್ರಸಾದ್ (34) ಎಂಬವರು ಮೆ.28 ರಂದು ಮನೆಯಲ್ಲಿ ಯಾರಿಗೂ ಹೇಳದೆ ನಾಪತ್ತೆಯಾಗಿದ್ದರು.

ಈ ಬಗ್ಗೆ ಪತ್ತೆ ಮಾಡಿ ಕೊಡುವಂತೆ ಗಣೇಶ್ ಪ್ರಸಾದ್ ರವರ ದೊಡ್ಡಪ್ಪನ ಮಗ ರಾಧಾಕೃಷ್ಣ ಎಂಬುವವರು ಕಡಬ ಠಾಣೆಯಲ್ಲಿ ಮೇ.31 ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಇಂದು ಕಾಣೆಯಾದ ಗಣೇಶ್ ಪ್ರಸಾದ್ ಅವರು ಪತ್ತೆಯಾಗಿದ್ದಾರೆ. ಕಾಣೆಯಾದ ವ್ಯಕ್ತಿ ವಾಪಸ್ಸು ಬಂದು ಮನೆಯವರೊಂದಿಗೆ ಕಡಬ ಠಾಣೆಗೆ ಬಂದು ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿದ್ದಾಗಿ ಹೇಳಿಕೆ ನೀಡಿದ್ದಾರೆ.

- Advertisement -

Related news

error: Content is protected !!