Thursday, May 2, 2024
spot_imgspot_img
spot_imgspot_img

ಕಡಬ: ಅಕ್ರಮ ಮರಳುಗಾರಿಕೆ ಮೇಲೆ ಪೊಲೀಸ್‌ ದಾಳಿ; ಪಂಪ್‌ ಸಹಿತ ಸೊತ್ತುಗಳು ವಶಕ್ಕೆ..!!

- Advertisement -G L Acharya panikkar
- Advertisement -
vtv vitla

ಕಡಬ: ಕಡಬ ತಾಲೂಕಿನ ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ಕುಮಾರಧಾರ ನದಿಯಲ್ಲಿ ಡ್ರೆಜ್ಜಿಂಗ್‌ ಮೂಲಕ ಮರಳುಗಾರಿಕೆಯನ್ನು ಅಕ್ರಮವಾಗಿ ಮಾಡುತ್ತಿದ್ದ ಸ್ಥಳಕ್ಕೆ ಕಡಬ ಪೊಲೀಸರು ದಾಳಿ ಮಾಡಿ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಕಡಬ ಪೊಲೀಸ್ ಠಾಣಾ ವ್ಯಾ ಪ್ತಿಯ ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ಅಕ್ರಮವಾಗಿ ಡ್ರಜ್ಜಿಂಗ್ ಬಳಸಿ ಮರಳು ತೆಗೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಡಬ ಪಿಎಸ್‌ಐ ಹರೀಶ್ ಅವರು ಸಿಬ್ಬಂದಿಗಳೊಂದಿಗೆ ಘಟನಾ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.ಈ ವೇಳೆ ಡ್ರೆಜ್ಜಿಂಗ್ ಬಳಸಿ ಮರಳು ತೆಗೆಯುತ್ತಿರುವುದು ಕಂಡು ಬಂದಿದೆ.

ಸ್ಥಳದಲ್ಲಿದ್ದ ಒಂದು 4 ಹೆಚ್ ಪಿ ಮೋಟರು ಅಳವಡಿಸಿರುವ ಡ್ರೆಜ್ಜಿಂಗ್ ಸಹಿತ ಬೋಟ್, ಡ್ರೆಜ್ಜಿಂಗ್ ಮೋಟಾರ್‌ಗೆ ಅಳವಡಿಸಿರುವ 6 ಇಂಚು ಸುತ್ತಳತೆಯ 20 ಅಡಿ ಉದ್ದದ ಫೈಬರ್ ಪೈಪು, ಆರು 6 ಇಂಚು ಸುತ್ತಳತೆಯ 20 ಅಡಿ ಉದ್ದದ ಕಬ್ಬಿಣದ ಪೈಪುಗಳು, 14 ಕಬ್ಬಿಣದ ಪೈಪುಗಳಿಗೆ ಅಳವಡಿಸಿದ ಕಬ್ಬಿಣದ ಡ್ರಮ್ ಗಳು, 4*6 ಅಡಿ ಉದ್ದದ ಕಬ್ಬಿಣದ ಜಾಲರಿ, 2 ಮರಳು ತೆಗೆಯಲು ಉಪಯೋಗಿಸುವ ಕಬ್ಬಿಣದ ಕೈ ಗುದ್ದಲಿಗಳು, ಪ್ಲಾಸ್ಟಿಕ್ ಬುಟ್ಟಿ ಇವುಗಳನ್ನು ವಶಕ್ಕೆ ಪಡೆದು ಸ್ಥಳದಲ್ಲಿಯೇ ಮಹಜರು ಮಾಡಲಾಗಿದೆ.

ಮುಂದಿನ ಕಾನೂನು ಕ್ರಮ ಕೈಗೊಳುವಂತೆ ಪೊಲೀಸರು ಕೋರಿ ಗಣಿ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.

- Advertisement -

Related news

error: Content is protected !!