ಕಡಬ: ವ್ಯಕ್ತಿಯೊಬ್ಬರು ಸ್ಫೋಟಕ ವಸ್ತುಗಳನ್ನು ಸಂಗ್ರಹ ಮಾಡಿ ಇಟ್ಟಿದ್ದ ಮನೆಗೆ ದಾಳಿ ನಡೆಸಿದ ಕಡಬ ಪೊಲೀಸರು ಒಬ್ಬ ಆರೋಪಿ, ಹಾಗೂ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಕಡಬ ಗ್ರಾಮದ ಪಾಲೋಳಿ ನಿವಾಸಿ ಜನಾರ್ಧನ ಗೌಡ(40) ಬಂಧಿತ ಆರೋಪಿ. ಈತ ಮನೆಯಲ್ಲಿ ಎರಡು ಕಂಟ್ರಿಮೇಡ್ ಪಿಸ್ತೂಲ್, ಎರಡು ಖಾಲಿ ತೋಟೆಗಳು, ರಂಜಕ, ಪೊಟ್ಯಾಶ್ ಹಾಗೂ ಕೇಪು ಸ್ಫೋಟಕ ವಸ್ತುಗಳನ್ನು ದಾಸ್ತಾನು ಮಾಡಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಸ್ತುಗಳನ್ನು ವಶಪಡಿಸಿ, ಆರೋಪಿಯನ್ನು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್ ರವರ ಆದೇಶದಂತೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಕ್ರಂ ಆಮ್ಟೆ ರವರ ಮಾರ್ಗದರ್ಶನದಂತೆ ಹಾಗೂ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ದಿನಕರ ಶೆಟ್ಟಿ ರವರ ನಿದರ್ಶನದಂತೆ ಮತ್ತು ಪುತ್ತೂರು ಗ್ರಾಮಾಂತರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ರವರ ಸಲಹೆಯಂತೆ ಕಡಬ ಪೊಲೀಸ್ ಠಾಣಾ ಉಪನಿರೀಕ್ಷಕ ರುಕ್ಮಾ ನಾಯ್ಕ್ ಹಾಗೂ ಎಎಸೈ ಚಿದಾನಂದ ರೈ, ಸ್ಕರಿಯ,ಪಿಸಿ ಭವಿತ್ ರೈ, ಶ್ರೀಶೈಲ್, ಮಹೇಶ್ ಜೀಪು ಚಾಲಕ ಕನಕರಾಜ್, ಅವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ.