Tuesday, April 23, 2024
spot_imgspot_img
spot_imgspot_img

ದಶಮಾನೋತ್ಸವದ ಸಂಭ್ರಮದಲ್ಲಿ ಕಡೇಶಿವಾಲಯದ ‘ಯುವಶಕ್ತಿ’ – ಇಲ್ಲಿದೆ ಸಾಧನೆಯ ಪಕ್ಷಿನೋಟ

- Advertisement -G L Acharya panikkar
- Advertisement -

ಬಂಟ್ವಾಳ: ದೇಶದ ಸಮಗ್ರತೆ, ರಾಷ್ಟ್ರೀಯತೆ, ಭಾವೈಕ್ಯತೆ, ಸಹೋದರತೆ, ಸರ್ವಧರ್ಮ ಸಮನ್ವಯತೆ, ನೈತಿಕಮೌಲ್ಯ, ಮಾನವೀಯತೆ ಇವೆಲ್ಲವೂ ಯುವಶಕ್ತಿಯ ಆತ್ಮ ಮತ್ತು ಮನಸ್ಸಿನಲ್ಲಿ ರಾರಾಜಿಸಬೇಕೆಂದು ಸಂಘ ಶಕ್ತಿಯೊಂದಿಗೆ ದೇಶಭಕ್ತಿ ಹಾಗೂ ಸಮಾಜಮುಖಿ ಕಾರ್ಯಗಳೊಂದಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರೇರಣೆಯಿಂದ ಹೆಸರುವಾಸಿಯಾದ ಸಂಸ್ಥೆ “ಯುವಶಕ್ತಿ ಕಡೇಶಿವಾಲಯ(ರಿ.).

ಐದು ಜನ ಯುವಕರು ಸೇರಿಕೊಂಡು ಸ್ಥಾಪಿಸಿದಂತಹ ಚಿಕ್ಕ ಸಸಿ ಇಂದು ಹೆಮ್ಮರವಾಗಿ ಬೆಳೆದು ಹಲವಾರಿಗೆ ಆಶ್ರಯತಾಣವಾಗಿದೆ. ಸಣ್ಣ ಪ್ರಾಯದ ಯುವಕರ ಕನಸಿನ ಕೂಸು ಕಡಲಿನಷ್ಟು ವಿಶಾಲವಾಗಿ ವ್ಯಾಪಿಸಿದೆ. ಹಲವಾರು ಅಶಕ್ತರ ಪಾಲಿಗೆ ಬೆಳಕಾದ ಈ ಸಂಸ್ಥೆಯ ಜನಸೇವಾ ಯೋಜನೆಗಳು ಲೆಕ್ಕವಿಲ್ಲದಷ್ಟು. ಯುವಶಕ್ತಿ ಮಾಡಿರುವ ಸಮಾಜ ಮುಖಿ ಕಾರ್ಯದ ಒಂದು ಪಕ್ಷಿನೋಟ ಇಲ್ಲಿದೆ.

10 ಲಕ್ಷಕ್ಕೂ ಅಧಿಕ ಮೊತ್ತವನ್ನು ಸೇವಾ ಸಂಸ್ಥೆಗಳ ಜೊತೆಗೆ ಹಾಗೂ ದಾನಿಗಳ ನೆರವಿನಿಂದ ಬಡಜನರಿಗೆ ತಲುಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ದಾನಗಳಲ್ಲಿ ಶ್ರೇಷ್ಠವಾದ ರಕ್ತದಾನ ಮಾಡಿ ಹಲವರ ಜೀವ ಉಳಿಸಿದೆ. 250ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಈ ಸಂಘಟನೆಯು ಇಲ್ಲಿಯವರೆಗೆ ಸುಮಾರು 2,300 ಯೂನಿಟ್ ರಕ್ತವನ್ನು ರಕ್ತನಿಧಿಯಿಂದ ರೋಗಿಗಳಿಗೆ ಪೂರೈಕೆ ಮಾಡಲಾಗಿದೆ.

ಲಾಕ್ ಡೌನ್ ಸಮಯದಲ್ಲಿ 500ಕ್ಕೂ ಅಧಿಕ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರಕಾರಿ 108 ಆಂಬುಲೆನ್ಸ್ ಚಾಲಕರಿಗೆ ಆಹಾರದ ಕಿಟ್ ವಿತರಣೆ.ಯುವಶಕ್ತಿ ಆಸರೆ ಯೋಜನೆಯಡಿ ಯುವಶಕ್ತಿಯ ಕಾರ್ಯಕರ್ತರ ಶ್ರಮದ ಫಲ ಬಡಜನರಿಗೆ ಕಲ್ಪಿಸಿದಂತಹ ಸಂಸ್ಥೆ ಹಾಗೂ ಬಡಜನರ ಮನೆ ದುರಸ್ತಿ ಕಾರ್ಯಕ್ಕೆ ಸಹಾಯ ಹಸ್ತ.ಅಪಘಾತ ತಡೆಯುವ ಹಿನ್ನಲೆಯಲ್ಲಿ ಶಾಲಾ ಮಕ್ಕಳ
ಹಿತದೃಷ್ಟಿಯನ್ನು ಮನಗಂಡು ದಾನಿಗಳ ನೆರವಿನಿಂದ ಬ್ಯಾರಿಕೇಡ್‌ಗಳ ಕೊಡುಗೆಯನ್ನು ನೀಡಿದ್ದಾರೆ.

ಜಿಲ್ಲೆಯಲ್ಲಿ ನಡೆದಂತಹ ಬ್ರಹ್ಮಕಲಶೋತ್ಸವ ನಾಗ ಮಂಡಲದಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಯುವಶಕ್ತಿ
ಕಡೇಶಿವಾಲಯ ಸದಸ್ಯರಿಂದ ಸ್ವಯಂ ಸೇವೆ ಹಾಗೂ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ಬಡವರ ಚಿಕಿತ್ಸೆಗೆ ದಾನಿಗಳ ನೆರವಿನಿಂದ ತುರ್ತು ಚಿಕಿತ್ಸಾ ಮೊತ್ತದ ಹಸ್ತಾಂತರ.

ಲಾಕ್ ಡೌನ್ ಸಮಯದಲ್ಲಿ ಸಂಸ್ಥೆಯ ಸದಸ್ಯರಿಂದ ಮನೆ ಬಾಗಿಲಿಗೆ ಔಷಧ ಹಾಗೂ ದಿನಬಳಕೆ ವಸ್ತುಗಳ ಪೂರೈಕೆ. ಕೊರೊನಾ ವಾರಿಯರ್ಸ್‌ಗಳಿಗೆ ಗೌರವಾರ್ಪಣೆ ಕಾರ್ಯಕ್ರಮ. ಕಡೇಶಿವಾಲಯ ಗ್ರಾಮದ 1200ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಹಾಗೂ ವಿತರಣಾ ಶಿಬಿರ.

ಕೊಡಗು, ಕೇರಳ ನೆರೆ ಸಂತ್ರಸ್ಥರಿಗೆ ಅಗತ್ಯ ವಸ್ತುಗಳ ಪೂರೈಕೆ.ಅಮೃತ ಸಂಜೀವಿನಿ(ರಿ.) ಮಂಗಳೂರು ಇದರ ಆಶ್ರಯದಲ್ಲಿ ಯುವಶಕ್ತಿ ಕಡೇಶಿವಾಲಯ(ರಿ.) ನೇತೃತ್ವದಲ್ಲಿ ಹದಿನೈದು ಅಶಕ್ತ ಬಡ ಹಿಂದೂ ಕುಟುಂಬಗಳಿಗೆ ಸಹಾಯ ಹಸ್ತನೀಡುವ `ಸಂಜೀವಿನಿ ಮಹಾಸಂಗಮ” ಎಂಬ ಅರ್ಥಪೂರ್ಣ ಕಾರ್ಯಕ್ರಮ ನಡೆಸಿದ ಹೆಗ್ಗಳಿಕೆ ಈ ಸಂಘಟನೆಯದ್ದಾಗಿದೆ.

ಆತ್ಮನಿರ್ಭರ ಸ್ವಾಭಿಮಾನಿ ಭಾರತಕ್ಕೆ ಪೂರಕವಾಗುವಂತೆ ಕಡೇಶಿವಾಲಯದಲ್ಲಿ ದೇಶಿಯ ಉತ್ಪನ್ನಗಳು ಜನಸಾಮಾನ್ಯರಿಗೆ ತಲುಪಬೇಕು ಹಾಗೂ ಅದರ ಬಳಕೆಯ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮದ ಆಯೋಜನೆ.ಗ್ರಾಮದ ಪ್ರತಿ ಬ್ಲಾಕ್‌ನಲ್ಲಿ ಅಗತ್ಯವಿದ್ದವರಿಗೆ ಮಣಿಪಾಲ್ಆರೋಗ್ಯ ಕಾರ್ಡ್ ವ್ಯವಸ್ಥೆ.

ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚು ಮಹತ್ವ: ಕರೋನಾ ಸಮಯದಲ್ಲಿ ಮೊಸರುಕುಡಿಕೆ
ಉತ್ಸವವನ್ನು “ನಂದಕಿಶೋರ” ಎಂಬ ವಿಶೇಷ ಸ್ಪರ್ಧೆಯ ಮೂಲಕ ಆಯೋಜನೆ.

ಮುಂಜಾನೆಯ ಶುಭೋದಯವನ್ನು ದೇವರ ವಿಡಿಯೋದ ಪ್ರತಿಯೊಬ್ಬರಿಗೂ ತಲುಪಿಸಿ ಧಾರ್ಮಿಕತೆಯತ್ತ ಜನರು ಒಲವು ತೋರಿಸುವಂತೆ ಮಾಡಿದ ಕೀರ್ತಿ.ಗ್ರಾಮವಿಕಾಸ ಸಮಿತಿಯ ಜೊತೆಗೂಡಿ ಗ್ರಾಮದ ಬಡಮಕ್ಕಳಿಗೆ ವಿದ್ಯಾರ್ಥಿವೇತನ. ಇಂತಹ ಹತ್ತು ಹಲವು ಯೋಜನೆಯ ಜೊತೆಗೆ ರಾಷ್ಟ್ರಭಕ್ತಿಯ ಚಿಂತನೆಗಳನ್ನು ಯುವಕರಿಗೆ ತುಂಬಿ ಸದೃಢ ಸಶಕ್ತ ಭಾರತ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ.

ಸ್ವಚ್ಛತೆಯ ಅಂಗವಾಗಿ ಸ್ವಚ್ಛ ಭಾರತದಂತಹ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಕೀರ್ತಿ ಯುವಶಕ್ತಿ
ಕಡೇಶಿವಾಲಯಕ್ಕೆ ಸಲ್ಲುತ್ತದೆ. ಯುವ ಶಕ್ತಿಯು ರಕ್ತಧಾನಿಗಳಿಗೆ ಗೂಗಲ್ ಫಾರ್ಮ್ ಅನ್ನು ಸಿದ್ಧಪಡಿಸಿದ್ದು ಇದರಲ್ಲಿ 1000 ಸದಸ್ಯರು ನೋಂದವಣೆ ಗೊಂಡಿದ್ದಾರೆ.

ಚಿರಪರಿಚಿತ ಸಂಸ್ಥೆ ಯುವಶಕ್ತಿ ಶಕ್ತಿ ಕಡೇಶಿವಾಲಯದ ಎಲ್ಲಾ ವಿನ್ಯಾಸಗಳು ಇದೆ ತಂಡದ ಸಾಮಾಜಿಕ ಜಾಲತಾಣ ವಿಭಾಗದಿಂದ ಮೂಡಿಬರುತ್ತಿದ್ದು. ಪ್ರಸ್ತುತ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ ದೇವಿಪ್ರಸಾದ್ ಬೇಂಗದಡಿ, ಕಾರ್ಯದರ್ಶಿಯಾಗಿ ಸುರೇಶ್ ಬನಾರಿ, ಸಂಚಾಲಕರಾಗಿ ವಿಜಿತ್ ಸಂಪೊಲಿ ಹಾಗೂ ಕಾರ್ಯವಿಭಾಗದ ಸರ್ವಸದಸ್ಯರಿಂದ ಕೂಡಿದ ಸಂಸ್ಥೆ.

ಯುವಕರು ಜಾತಿ ದ್ವೇಷ ಭೇದ ಭಾವಗಳನ್ನು ಮರೆತು ಸಂಘಟಿತರಾಗುವ ಅನಿವಾರ್ಯತೆ ಇದೆ. ಸಮಾಜೋದ್ಧಾರ ಎಲ್ಲಾ ಯುವಕರ ಪ್ರಮುಖ ಗುರಿಯಾಗಲಿ. ರಾಮರಾಜ್ಯದ ಕನಸು ನನಸಾಗಲಿ ಎಂದು ಯುವಕರಿಗೆ ಮಾರ್ಗದರ್ಶನನೀಡುವ ಯುವಶಕ್ತಿ, ಜಾತಿ, ಮತ, ಬಡವ, ಶ್ರೀಮಂತ ಎಂಬಲ್ಲಿ ಭೇದವಿಲ್ಲದೇ ಸೇವಾಕಾರ್ಯಗಳ ಮೂಲಕ ಚಿರಪರಿಚಿತವಾದ ಸಂಸ್ಥೆ ಹತ್ತು ವರ್ಷಗಳನ್ನು ಪೂರೈಸಿ “ದಶಮಾನೋತ್ಸವ”ದ ಸಂಭ್ರಮದಲ್ಲಿದೆ.

ಹಲವಾರು ಹಿರಿಯರ ಮಾರ್ಗದರ್ಶನದೊಂದಿಗೆ ಎಲ್ಲಾ ಯುವಕರಿಗೆ ಸ್ಫೂರ್ತಿಯನ್ನು ನೀಡುವಂತಹ ಈ ಸಂಸ್ಥೆಯ ಇನ್ನುಳಿದ ಎಲ್ಲಾ ಯೋಜನೆಗಳು ಕಾರ್ಯರೂಪಕ್ಕೆ ಬಂದು ಜಿಲ್ಲೆ, ರಾಜ್ಯ,ದೇಶದಲ್ಲಿಯೇ ಮಾದರಿ ಸಂಸ್ಥೆಯಾಗಲಿ ಎಂಬುವುದು ನಮ್ಮ ಆಶಯ.

- Advertisement -

Related news

error: Content is protected !!