Monday, July 27, 2026
spot_imgspot_img
spot_imgspot_img

ಕಲ್ಲೆಂಚಿಪಾದೆ: ಗ್ರಾಮ ದೈವ ಶ್ರೀ ಪಿಲಿಚಾಮುಂಡಿ (ಕಲ್ಲೆಂಚಿನಾಯ) ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಅದ್ದೂರಿಯಾಗಿ ಸಂಪನ್ನ

- Advertisement -
- Advertisement -

ಕಲ್ಲೆಂಚಿಪಾದೆ: ಗ್ರಾಮ ದೈವ ಶ್ರೀ ಪಿಲಿಚಾಮುಂಡಿ (ಕಲ್ಲೆಂಚಿನಾಯ) ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವವು ಏ.12-4-2025ನೇ ಶನಿವಾರ ಅದ್ದೂರಿಯಾಗಿ ನಡೆಯಿತು.

ಏ 12 ನೇ ಶನಿವಾರ ಬೆಳಿಗ್ಗೆ ಗಣಹೋಮ ನಡೆಯಿತು. ಸಂಜೆ ಅಳಿಕೆಗುತ್ತು ಚಾವಡಿ ಮನೆಯಿಂದ ಭಂಡಾರ ಆಗಮನವಾಯಿತು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಜೆ ಗಾನನಿಧಿ, ದಿವ್ಯನಿಧಿ ರೈ ಮತ್ತು ಬಳಗದವರಿಂದ “ಸ್ವರ ಸಮರ್ಪಣೆ” ಸಂಗೀತ ಕಾರ್ಯಕ್ರಮ ನಡೆಯಿತು.

ಬಳಿಕ ದಾನಿಗಳ ಹೆಸರುಗಳ ಶಿಲಾ ಫಲಕದ ಅನಾವರಣ ಕಾರ್ಯಕ್ರಮ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಿತು. ಬಳಿಕ ಶ್ರೀ ಪಿಲಿಚಾಮುಂಡಿ, ದೈವರಾಜ ಗುಳಿಗ ಮತ್ತು ಸಪರಿವಾರ ದೈವಗಳ ನೇಮೋತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ಅಳಿಕೆಗುತ್ತಿನ ಮನೆಯವರು, ಕುಟುಂಬಸ್ಥರು ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!