- Advertisement -
- Advertisement -
ಕಮಲ ಹ್ಯಾರಿಸ್ ಉಪಾಧ್ಯಕ್ಷರಾಗಿ ಅಮೆರಿಕದ ಶ್ವೇತಭವನಕ್ಕೆ ಪ್ರವೇಶಿಸಿದ ಮೊದಲ ಬ್ಲಾಕ್ ಅಮೆರಿಕನ್ ಮಹಿಳೆಯಾಗಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ಮೊದಲ ಏಷ್ಯಾನ್ ಅಮೆರಿಕನ್ ಮಹಿಳೆ ಇವರಾಗಿದ್ದಾರೆ.

ಕ್ಯಾಲಿಫೋರ್ನಿಯಾದ ಸೆನೆಟರ್ ಆಗಿರುವ ಹ್ಯಾರಿಸ್, ಈ ಮೊದಲು ಸ್ಯಾನ್ಫ್ರಾಸಿಸ್ಕೋದಲ್ಲಿ ವಕೀಲರಾಗಿದ್ದರು. ಅಲ್ಲದೇ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿ ಕೂಡ ಸೇವೆ ಸಲ್ಲಿಸಿದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಭಾರತೀಯ ಮೂಲದ ಹ್ಯಾರಿಸ್ ಶ್ವೇತಭವನ ಪ್ರವೇಶ ಭಾರತೀಯರಲ್ಲಿಯೂ ಸಂತಸ ತಂದಿದೆ.

ಹ್ಯಾರಿಸ್ ತಾಯಿ ಭಾರತೀಯರಾದರೆ, ತಂದೆ ಜಮೈಕಾದವರು. ಇವರಿಬ್ಬರು ಹಲವು ವರ್ಷಗಳ ಹಿಂದೆ ಅಮೆರಿಕದಲ್ಲಿ ವಾಸ್ತವ್ಯ ಆರಂಭಿಸಿದ್ದರು.
ಬೈಡೆನ್ ವಿಜಯದಲ್ಲಿ ಹ್ಯಾರಿಸ್ ಪಾತ್ರ ಕೂಡ ಬಹಳಷ್ಟಿದೆ. ಮಹಿಳೆಯರು ಮತ್ತು ಕಪ್ಪು ವರ್ಣಿಯರನ್ನು ಸೆಳೆಯುವಲ್ಲಿ ಹ್ಯಾರಿಸ್ ಪ್ರಮುಖ ಪಾತ್ರವಹಿಸಿದರು.

- Advertisement -








