Wednesday, June 24, 2026
spot_imgspot_img
spot_imgspot_img

ಕಂಬಳಬೆಟ್ಟು: ಅದ್ದೂರಿಯಾಗಿ ಸಂಪನ್ನಗೊಂಡ ಕಂಬಳಬೆಟ್ಟಿನ ಧರ್ಮನಗರದ 53ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವ

- Advertisement -
- Advertisement -

ಭೂಮಿ ಪೂಜನಾ ಕಾರ್ಯಕ್ರಮ: ಭಕ್ತಾದಿಗಳಿಂದ ಶ್ರೀ ದೇವರಿಗೆ ಸಾಮೂಹಿಕ ಆರತಿ

ಕಂಬಳಬೆಟ್ಟು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ -ಕಂಬಳಬೆಟ್ಟು ಆಶ್ರಯದಲ್ಲಿ ಧರ್ಮನಗರ ಸಮಾಜ ಮಂದಿರದಲ್ಲಿ ಮೂರು ದಿನಗಳ ಕಾಲ ನಡೆದ 53ನೇ ವರ್ಷದ ಶ್ರೀ ಮಹಾಗಣೇಶೋತ್ಸವವು ಬಹಳ ಅದ್ದೂರಿಯಾಗಿ ಸಂಪನ್ನಗೊಂಡಿದೆ. ಸೆ. 7 ನೇ ತಾರೀಕು ಶನಿವಾರದಂದು ಬೆಳಗ್ಗೆ ಶ್ರೀ ಮಹಾಗಣಪತಿ ಹವನ ನಡೆದು ಬಳಿಕ ಶ್ರೀ ಮಹಾಗಣಪತಿ ಮೂರ್ತಿ ಪ್ರತಿಷ್ಠೆ ಹಾಗೂ ಉತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ವಿ.ಹೆಚ್.ಪಿ. ಬಂಟ್ವಾಳ ಪ್ರಖಂಡದ ಅಧ್ಯಕ್ಷರು ಹಾಗೂ ವಕೀಲರಾದ ಶ್ರೀ ಪ್ರಸಾದ್ ಕುಮಾರ್ ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಹಿರಿಯ ಕಾರ್ಯಕರ್ತರಾದ ಶ್ರೀ ತಿಮ್ಮಪ್ಪ ಕೋಟಿಕೆರೆ, ವಿಟ್ಲ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಪುರೋಹಿತ ವೇ| ಮೂ| ಗೋಪಾಲಕೃಷ್ಣ ಭಟ್ಟ್ ಮಿತ್ತೂರು ಮೂರ್ತಿಪ್ರತಿಷ್ಠೆಯನ್ನು ಮಾಡಿದರು.

ಬಳಿಕ ಶ್ರೀ ದೇವರಿಗೆ ವಿವಿಧ ಪೂಜಾ ಸೇವೆ ನಡೆದು, ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ನಂತರ ಮಧ್ಯಾಹ್ನ ಮಹಾಪೂಜೆ , ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ ಧರ್ಮನಗರದ ಬಾಲಗೋಕುಲದ ವಿದ್ಯಾರ್ಥಿಗಳಿಗಳಿಂದ ಭಜನಾ ಸೇವೆ ನಡೆಯಿತು. ಬಳಿಕ ರಾಮಾಯಣದ ಬಗ್ಗೆ ಪ್ರಶ್ನೋ ತ್ತರ ಸ್ಪರ್ಧೆ ನಡೆದು ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

ರೋಮಾಂಚನಕಾರಿ ಹಗ್ಗ ಜಗ್ಗಾಟ ಸ್ಪರ್ದೆಯಲ್ಲಿ ವೈದ್ಯನಾಥ ಮಲರಾಯ ತಂಡ ಪ್ರಥಮ ಸ್ಥಾನ ಪಡೆದರೆ ಡಿಎಫ್‌ಸಿ ಧರ್ಮನಗರ ದ್ವಿತೀಯ ಸ್ಥಾನ ಪಡೆದು ಕೊಂಡಿತು.

ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯೋಪಾಸನಾ ಕಲಾ ಅಕಾಡೆಮಿ ( ರಿ. ) ಪುತ್ತೂರು ಇವರು ಪ್ರಸ್ತುತ ಪಡಿಸುವ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಇವರ ನೃತ್ಯ ನಿರ್ದೇಶನದಲ್ಲಿ ನೃತ್ಯೋಹಂ ಸಾಂಸ್ಕೃತಿಕ ವೈಭವ ನಡೆಯಿತು.

ದಿನಾಂಕ 08-09-2024ನೇ ಭಾನುವಾರ ಬೆಳಿಗ್ಗೆ ಸಾರ್ವಜನಿಕ ಪುರುಷರ ಮುಕ್ತ ಹಳ್ಳಿ ಮಣ್ಣಿನ ಕಬಡ್ಡಿ ಪಂದ್ಯಾಟ ನಡೆಯಿತು. ಪ್ರಥಮ ಸ್ಥಾನ ಬ್ರದರ್ಸ್ ರೆಂಜ, ದ್ವಿತೀಯ ಸ್ಥಾನ ಪಾಟ್ಲ ಫ್ರೆಂಡ್ಸ್ ಕಲ್ಲೇಗ, ತೃತೀಯ ಸ್ಥಾನ ತುಳುನಾಡ ಫೈಟರ್ಸ್ ಕೇಪು ಹಾಗೂ ಚತುರ್ಥ ಸ್ಥಾನ ತುಳುನಾಡ ಫೈಟರ್ಸ್ ಕೇಪು ಬಿ ತಂಡ ಗಳಿಸಿಕೊಂಡಿದ್ದಾರೆ.

ಮಧ್ಯಾಹ್ನ ಮಹಿಳಾ ಭಜನಾ ಸಮಿತಿ ಧರ್ಮನಗರ ಇವರಿಂದ ಭಜನಾ ಕಾರ್ಯಕ್ರಮ ನಡೆದು ಬಳಿಕ ಮಹಾಪೂಜೆ , ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ತಂಡ ವಿಷ್ಣುನಗರ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಮಾತೆಯರ ಸಾಮೂಹಿಕ ಕುಂಕುಮಾರ್ಚನೆ, ನಡೆದು ನಂತರ ವಿಶೇಷ ಭೂಮಿ ಪೂಜನಾ ಕಾರ್ಯಕ್ರಮ ನಡೆಯಿತು.ಮಾತಾಭೂಮಿ: ಪುತ್ರೋಹಂ ವೃಥಿವ್ಯಾ: = ಭೂಮಿ ನಮ್ಮ ತಾಯಿ. ನಾವು ಅದರ ಪುತ್ರರು. ಶತಮಾನಗಳಿಂದ ಭಾರತ ಒಂದು ಸಮೃದ್ಧ, ಸುಸಂಪನ್ನ ಪ್ರಕೃತಿ ಪ್ರೇಮಿ ರಾಷ್ಟ್ರವಾಗಿದೆ. ನಾವು ಪ್ರಕೃತಿಯೊಂದಿಗೆ ಮಾತೃತ್ವ ಭಾವಯುಕ್ತ ಗೌರವ ದೃಷ್ಟಿಯನ್ನು ಇಟ್ಟುಕೊಂಡಿದ್ದೇವೆ. ಆ ಪ್ರಯುಕ್ತ ನಮ್ಮಲ್ಲಿ ಎಲ್ಲಾ ಮನೆಯವರು ತಮ್ಮ ಮನೆಯ ಪರಿಸರದಿಂದ ಐದು ಮುಷ್ಟಿ ಮಣ್ಣನ್ನು ತಂದು ಗಣಪತಿಯ ಸನ್ನಿಧಿಯಲ್ಲಿ ಒಟ್ಟು ಸೇರಿಸಿ ಕಲಾಶಾಭಿಷೇಕ ಮಾಡಿ ಪೂಜಿಸಿ, ಅನಂತರ ಪ್ರಸಾದ ರೂಪದಲ್ಲಿ ಒಂದು ಮುಷ್ಟಿ ಮಣ್ಣನ್ನು ಸ್ವೀಕರಿಸಿ ಮತ್ತೆ ತಮ್ಮ ತಮ್ಮ ಭೂಮಿಗೆ ಸೇರಿಸುವ ಮೂಲಕ ಭೂಮಿಯನ್ನು ಪೂಜಿಸುವ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಶ್ರೀ ಮಹಾಗಣಪತಿಯ ರಂಗಪೂಜೆ ನಡೆದು, ಮಹಾಪೂಜೆಯೊಂದಿಗೆ ಭಕ್ತಾದಿಗಳೆಲ್ಲರೂ ಸೇರಿ ಸಾಮೂಹಿಕವಾಗಿ ಆರತಿಯನ್ನು ಬೆಳಗಿದರು. ತದನಂತರ ಭೂಮಿ ಪೂಜನ ಎಂಬ ವಿಷಯದಲ್ಲಿ ಶ್ರೀ ಜೀತೇಂದ್ರ ಪ್ರಾತಾಪನಗರ ಸಂಯೋಜಕರು, ಗ್ರಾಮ ವಿಕಾಸ ಮಂಗಳೂರು ವಿಭಾಗ ಇವರು ಧಾರ್ಮಿಕ ಉಪನ್ಯಾಸ ನೀಡಿದರು. ಬಳಿಕ ಪ್ರಸಾದ ವಿತರಣೆ ನಡೆಯಿತು.

09-09-2024ನೇ ಸೋಮವಾರ ಬೆಳಗ್ಗೆ ಶ್ರೀ ದೇವರಿಗೆ ಪೂಜಾ ಸೇವೆ ಆರಂಭವಾಗಿ ಬಳಿಕ 45 ಕೆ.ಜಿ. ವಿಭಾಗದ ಹಳ್ಳಿ ಮಣ್ಣಿನಲ್ಲಿ ಮನೋರಂಜಿನೀಯ ಕಬಡ್ಡಿ ಪಂದ್ಯಾಟ ನಡೆಯಿತು ಪ್ರಥಮ ಸ್ಥಾನ: ವೀರಕೇಸರಿ ಫ್ರೆಂಡ್ಸ್ ದೇವಸ್ಯ, ದ್ವಿತೀಯ ಸ್ಥಾನ ಫ್ರೆಂಡ್ಸ್ ವಿಟ್ಲ, ತೃತೀಯ ಸ್ಥಾನ ಚಂದಳಿಕೆ ಫ್ರೆಂಡ್ಸ್, ಹಾಗೂ ಭಗತ್ ಫ್ರೆಂಡ್ಸ್ ಚತುರ್ಥ ಸ್ಥಾನದೊಂದಿಗೆ ವಿಜೇತರಾಗಿದ್ದಾರೆ. ಮಧ್ಯಾಹ್ನದ ಮಹಾಪೂಜೆ ನಡೆದು, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಬಳಿಕ ಇಡ್ಕಿದು ಸೇವಾ ಸಹಕಾರಿ ಸಂಘ ನಿ. ಇದರ ಅಧ್ಯಕ್ಷರಾದ ಶ್ರೀ ಸುಧಾಕರ ಶೆಟ್ಟಿ ಬೀಡಿನಮಜಲು ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ಶಿವಪ್ರಸಾದ್ ಮಲೆಬೆಟ್ಟು ಸಂಚಾಲಕರು, ಸಾಮರಸ್ಯ ವೇದಿಕೆ ಮಂಗಳೂರು ವಿಭಾಗ ಇವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ವೇದಿಕೆಯ ಉಪಸ್ಥಿತರಿದ್ದ ಅತಿಥಿಗಳು ಹಾಗೂ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ರಮೇಶ್ ಧರ್ಮನಗರ ಮತ್ತು ಪಧಾಧಿಕಾರಿಗಳು ಬಹುಮಾನ ವಿತರಣೆ ಮಾಡಿದರು.ಕಾರ್ಯಕರ್ತರಾದಜೈದೀಪ್ ಅಮೈ, ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಿರ್ವಹಿಸಿದರು.

ಕಾರ್ಯಕರ್ತ ತಿಮ್ಮಪ್ಪ ಮಂಜಪಾಲು, ಸ್ವಾಗತಿಸಿ, ಉಪಾಧ್ಯಕ್ಷ ನಂದ ಕುಮಾರ್ ಧನ್ಯವಾದವಿತ್ತರು. ಸುಶ್ಮಿತಾ ಕಾರ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಜೆ ಶ್ರೀ ಮಹಾಗಣಪತಿಯ ಭವ್ಯ ಶೋಭಾಯಾತ್ರೆಯು ಧರ್ಮನಗರದಿಂದ ಹೊರಟು ನೂಜಿ, ಉರಿಮಜಲು, ಅಶೋಕ ನಗರ ಮಾರ್ಗವಾಗಿ ಆಕರ್ಷಣೀಯ ಬ್ಯಾಂಡ್ ವಾಲಗ, ಚೆಂಡೆವಾದನದೊಂದಿಗೆ ಏಕದಂತ ನೃತ್ಯ ಭಜನಾ ತಂಡ ಪೆರ್ಲ ಮತ್ತು ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ತಂಡ ವಿಷ್ಣುನಗರ- ಕುಂಡಡ್ಕ ಇವರ ವತಿಯಿಂದ ನಡೆದ ಕುಣಿತ ಭಜನೆಯು ಮತ್ತಷ್ಟು ಮೆರಗು ನೀಡಿತು. ಬಳಿಕ ಧರ್ಮನಗರದ ಆರ್ಕೆಚ್ಚಾರು ಡಾ.ಬಿ.ಸಂಜೀವ ರೈ ಯವರ ಕೆರೆಯಲ್ಲಿ ವಂದೇ ಮಾತರಂ ಗೀತೆಯನ್ನು ಹಾಡುವುದರೊಂದಿಗೆ ಮೂರ್ತಿ ಜಲಸ್ಥಂಭನಗೊಂಡಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತಾದಿಗಳು ಶ್ರೀ ಮಹಾಗಣಪತಿಯ ಕೃಪೆಗೆ ಪಾತ್ರರಾದರು. ನಂತರ ದಿನೇಶ್ ಕೋಡಪದವು ಸಾರಥ್ಯದಲ್ಲಿ ಯಕ್ಷತೆಲಿಕೆ ಎಂಬ ಯಕ್ಷ ಹಾಸ್ಯ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಂಘದ ಪ್ರಚಾರಕರಾದ ಪ್ರಶಾಂತ್, ಹಿರಿಯರಾದ ಮಹಾಬಲ ಕಲ್ಲಡ್ಕ, ಸುಬ್ರಹ್ಮಣ್ಯ ಭಾರಣಿಕೆರೆ, ಸಂಸದ ಕ್ಯಾಪ್ಶನ್ ಬ್ರಿಜೇಶ್ ಚೌಟ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಹಿಂದೂ ಮುಖಂಡರಾದ ಮುರಳಿಕೃಷ್ಣ ಹಸಂತಡ್ಕ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಲಾ ಶೆಟ್ಟಿ, ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಉದ್ಯಮಿ ದಿವಾಕರ ದಾಸ್ ನೇರ್ಲಾಜೆ, ಉದ್ಯಮಿ ಶ್ರೀಧರ ಶೆಟ್ಟಿ ಗುಬ್ಯ ಮೇಗಿನಗುತ್ತು, ರಾಜಶೇಖರ ಶೆಟ್ಟಿ ತಾಳಿಪಡ್ಪು, ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಧರ್ಮನಗರ ಗಣೇಶೋತ್ಸವದಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದರು.

- Advertisement -

Related news

error: Content is protected !!