Monday, February 10, 2025
spot_imgspot_img
spot_imgspot_img

ಮಾದರಿಯಾದ ಧರ್ಮ ನಗರದ 49ನೇ ವರ್ಷದ ಗಣೇಶೋತ್ಸವ.

- Advertisement -
- Advertisement -

ವಿಟ್ಲ:-ಧರ್ಮ ನಗರದ 49ನೇ ವರ್ಷದ ಗಣೇಶೋತ್ಸವವು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಲತಾ ಸುರೇಶ್ ಕಾರ್ಯಡಿ ಇವರು ಧ್ವಜಾರೋಹಣ ನಡೆಸಿ ಕೊಡುವುದರೊಂದಿಗೆ ಚಾಲನೆ ನೀಡಿದರು.ಕಳೆದ 49 ವರ್ಷಗಳಿಂದ ವಿಜ್ರಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದ ಗಣೇಶೋತ್ಸವ ಈ ವರ್ಷ ಕೊರೋನ ಮಹಾಮಾರಿ ಇಂದ ಸರಳವಾಗಿ ವಿಶೇಷವಾಗಿಯೂ ನಡೆಯಿತು.

ಬೆಳಿಗ್ಗೆ 6.15 ಕ್ಕೆ ಆರಂಭವಾದ ಮಹಾಗಣಪತಿ ಹವನವು 7.15ಕ್ಕೆ ಪೂರ್ಣಾವಧಿಗೊಂಡಿತ್ತು.
8ಗಂಟೆಗೆ ಭಗವದ್ವಜ ಹಾರಿಸುವುದರ ಮೂಲಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಲತಾ ಸುರೇಶ್ ದಂಪತಿ ವಿದ್ಯುಕ್ತವಾಗಿ ಗಣೇಶೋತ್ಸವಕ್ಕೆ ಚಾಲನೆ ನೀಡಿದರು.8:15 ರ ಶುಭಮುಹೂರ್ತದಲ್ಲಿ ಶ್ರೀ ಮಹಾ ಗಣೇಶನ ಪ್ರತಿಷ್ಠಾಪನೆಯನ್ನು ವೇದಮೂರ್ತಿ ಶ್ರೀ ಗೋಪಾಲಕೃಷ್ಣ ತಂತ್ರಿ ಮಿತ್ತೂರು ಇವರು ನೆರವೇರಿಸಿದರು.

9:00 ರಿಂದ ಬೈಲುವಾರು ಭಜನೆ ಆರಂಭಗೊಂಡು ಧರ್ಮನಗರ ಸುತ್ತಮುತ್ತ, ನೂಜಿ, ಮೂಡೈಮಾರ್, ಕಾರ್ಯಾಡಿ ಬೈಲುಗಳ ತಂಡಗಳು ಭಜನೆಯನ್ನು ನೆರವೇರಿಸಿದರು.ಧರ್ಮ ನಗರದ ಭಜನಾ ವ್ಯಾಪ್ತಿಯ ಪ್ರತಿ ಮನೆಯವರು ಮನೆಯಲ್ಲೇ ತಯಾರಿಸಿದ ಪ್ರಸಾದವನ್ನು ತಂದು ಶ್ರೀ ಗಣೇಶನಿಗೆ ಅರ್ಪಿಸಿ ಕೃತಜ್ಞ ರಾದರು.  ಪುತ್ತೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸಂಜೀವ ಮಠಂದೂರು ಅವರು ಆಗಮಿಸಿ ಶುಭ ಹಾರೈಸಿದರು. ಬಾ.ಜ.ಪ ದ ಪುತ್ತೂರು ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಉಪಸ್ಥಿತರಿದ್ದರು.

ಪ್ರತಿ ವರ್ಷವೂ ಮೂರು ದಿನ ನಡೆಯುತ್ತಿದ್ದಂತೆ ಗಣೇಶೋತ್ಸವ ಈ ಬಾರಿ ಒಂದೇ ದಿನಕ್ಕೆ ಸೀಮಿತವಾಗಿತ್ತು. 12:30 ಕ್ಕೆ ದೇವಿ ಗುಡಿಯಲ್ಲಿ ಮಹಾಮಂಗಳಾರತಿ ಒಂದು ಗಂಟೆಗೆ ಗಣೇಶನ ಸನ್ನಿಧಿಯಲ್ಲಿ ಮಹಾಮಂಗಳಾರತಿ ನಡೆಯಿತು.

ವಿಟ್ಲ ಸೀಮೆಯ ಗುರಿಕಾರರಾದ  ಶ್ರೀ ಕೆ ಟಿ ವೆಂಕಟೇಶ್ವರ ನೂಜಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 48ವರ್ಷ ಸಾಗಿ ಬಂದ ಉತ್ಸವ ಆಚರಣೆಯ ಅವಲೋಕನದ ಜತೆ ಮುಂದಕ್ಕೆ  ಬರುವ 50ನೇ ವರ್ಷದ ಸುವರ್ಣ ಮಹೋತ್ಸವದ ಸಂದರ್ಭ  ದೇಶಕ್ಕೆ ಮಾದರಿ ಆಗುವ ರೀತಿಯಲ್ಲಿ ನಾವು  ಉತ್ಸವ ಆಚರಿಸಲಿದ್ದೇವೆ ಎಂದು ತಿಳಿಸಿದರು. ಜನರ  ಶ್ರದ್ಧಾ ಭಕ್ತಿಯ ಸಹಕಾರ ಬೇಕೆಂದರು.

ಮಂದಿರದ ಒಳಗೆ ಭಕ್ತಾದಿಗಳಿಗೆ ಸರತಿಸಾಲಿನಲ್ಲಿ ಬರುವಂತೆ ಸೂಚನೆಯನ್ನು ನೀಡಿದ ಕಾರ್ಯಕರ್ತರು ಮಾಸ್ಕ್ ಸ್ಯಾನಿಟೈಸರ್ ಸಾಮಾಜಿಕ ಅಂತರ ಇರುವಂತೆ ನೋಡಿಕೊಂಡರು.ಪೂಜಾ ವಿಧಿ ವಿಧಾನಗಳೊಂದಿಗೆ ಯಾವುದೇ  ಸೇವೆಗಳು ಇಲ್ಲದೆ 49 ನೇ ವರ್ಷದ  ಇಂದಿನ ಗಣೇಶೋತ್ಸವವು ಸರಕಾರದ ನಿಯಮಗಳನ್ನು ಪಾಲಿಸುತ್ತಾ ಭಕ್ತರ ದರ್ಶನದೊಂದಿಗೆ ಒಂದು ಮೂವತ್ತಕ್ಕೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಮುಗಿದು ಗಣೇಶನ ವಿಗ್ರಹವನ್ನು ವಂದೇ ಮಾತರಂ ಗೀತೆಯೊಂದಿಗೆ ಖಾಸಗಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.

- Advertisement -

Related news

error: Content is protected !!