Saturday, April 20, 2024
spot_imgspot_img
spot_imgspot_img

ಕಾಣಿಯೂರು : ಹೈವೇ ದರೋಡೆ ನಡೆಸಿ ಕದ್ದ ಸೊತ್ತನ್ನು ಸೊಸೈಟಿಯಲ್ಲಿ ಅಡವಿಟ್ಟ ಖದೀಮರು – ತನಿಖೆಗೆ ಆಗಮಿಸಿದ ಕೇರಳ ಪೋಲಿಸರು

- Advertisement -G L Acharya panikkar
- Advertisement -

ಕಾಣಿಯೂರು : ಕೇರಳದಲ್ಲಿ ಹೈವೇ ದರೋಡೆಯಲ್ಲಿ ನಿರತವಾಗಿದ್ದ ದುಷ್ಕರ್ಮಿಗಳ ತಂಡ ಕದ್ದ ಚಿನ್ನಾಭರಣಗಳನ್ನೂ ಕಡಬ ತಾಲೂಕಿನ ಕಾಣಿಯೂರಿನ ಸಹಕಾರಿ ಸಂಘವೊಂದರಲ್ಲಿ ಅಡಮಾನವಿರಿಸಿದ್ದೂ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಇದರ ತನಿಖೆಗೆ ಕೇರಳ ಪೋಲೀಸರ ತಂಡ ಆರೋಪಿಯ ಜೊತೆ ಕಾಣಿಯೂರಿಗೆ ಆಗಮಿಸಿದೆ.

ಕಾಣಿಯೂರಿನಲ್ಲಿರುವ ಚಾರ್ವಾಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದಲ್ಲಿ ಹೈವೇ ದರೋಡೆಯ ಆರೋಪಿಗಳು ಕದ್ದ ಮಾಲನ್ನು ಅಡವಿರಿಸಿ ಸಾಲ ಪಡೆದಿದ್ದಾರೆ ಎಂಬ ವಿಚಾರ ಕೃತ್ಯದ ಭಾಗಿಯಾದ ಆರೋಪಿಯೊಬ್ಬನ ತನಿಖೆಯ ವೇಳೆ ಪತ್ತೆಯಾದ ಹಿನ್ನಲೆಯಲ್ಲಿ ಕೇರಳ ಪೊಲೀಸರ ತಂಡ ಇಲ್ಲಿಗೆ ಭೇಟಿ ನೀಡಿದೆ. ಕೇರಳದಲ್ಲಿ ಖತರ್ನಾಕ್ ದುಷ್ಕರ್ಮಿಗಳ ತಂಡವೊಂದು ಹೆದ್ದಾರಿಯಲ್ಲಿ ದರೋಡೆ ಕೃತ್ಯದಲ್ಲಿ ನಿರತವಾಗಿತ್ತು. ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ರಾತ್ರಿ ವೇಳೆ ಅಡ್ಡಗಟ್ಟಿ ದರೋಡೆ ಮಾಡುವ ಈ ತಂಡದ ಒಬ್ಬ ಸದಸ್ಯನನ್ನು ಇತ್ತೀಚಿಗೆ ಕಾಂಜಾಗಾಡ್ ಪೊಲೀಸರು ಬಂಧಿಸಿದ್ದರು.

ಬಂಧಿತ ಆರೋಪಿಯ ವಿಚಾರಣೆ ವೇಳೆ ತಾವು ಕದ್ದ ಚಿನ್ನಾಭರಣಗಳನ್ನೂ ಚಾರ್ವಾಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದಲ್ಲಿ ಅಡವಿಟ್ಟು ಸಾಲ ಪಡೆದಿರುವುದಾಗಿ ತಿಳಿಸಿದ್ದರು.ಅಲ್ಲದೇ ಕೃತ್ಯ ಕ್ಕೆ ಬಳಸಿದ ಚಾಕು ತಲುವಾರು ಇತ್ಯಾದಿ ಮಾರಾಕಯುದ್ದಗಳನ್ನೂ ಇಲ್ಲಿಯೇ ಬಿಸಾಡಿರುವುದಾಗಿಯೂ ತಿಳಿಸಿದ್ದರು.
ಈ ಹಿನ್ನಲೆಯಲ್ಲಿ ಇಲಾಖೆಯ ವಾಹನದಲ್ಲಿ ಕಾಣಿಯೂರಿನ ಈ ಸಹಕಾರಿ ಸಂಘಕ್ಕೆ ಆಗಮಿಸಿದ ಕೇರಳ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಹಕಾರಿ ಸಂಘದ ಹಿಂಬದಿ ಆರೋಪಿಗಳು ಬಿಸಾಡಿರುವ ಮಾರಕಾಸ್ತ್ರಗಳು ಪತ್ತೆಯಾಗಿದೆ .ಸದ್ಯ ಅದರ ಮಹಜರು ನಡೆಯುತ್ತಿದೆ.

ಅಡವಿಟ್ಟ ಚಿನ್ನಾಭರಣಗಳ ಪರಿಶೀಲನೆ ನಡೆಯುತ್ತಿದ್ದೂ ಒಟ್ಟು ಚಿನ್ನದ ಮೌಲ್ಯ ಇನ್ನಷ್ಟೇ ತಿಳಿದು ಬರಬೇಕಿದೆ . ಕೇರಳದ ನಿವಾಸಿ ರಾಜೀವ್ ಬಂಧಿತ ಆರೋಪಿಯಾಗಿದ್ದು ಈತ ನೀಡಿದ ಮಾಹಿತಿಯಂತೆ ಪೊಲೀಸರು ತನಿಖೆಗೆ ಚಾರ್ವಾಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘ ಆಗಮಿಸಿದ್ದರು. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳಾದ ಉನ್ಮೇಶ್ ಹಾಗೂ ಜೋಗಿ ಎಂಬವರು ಪರಾರಿಯಾಗಿದ್ದು ಇವರಿಗಾಗಿ ಪೊಲೀಸರು ಶೋಧ ನಡೆಸುತಿದ್ದಾರೆ.

ಈ ಮೂವರು ಆರೋಪಿಗಳು ಕಾಣಿಯೂರಿನ ಮಠತ್ತಾರು ಎಂಬಲ್ಲಿ ರಬ್ಬರ್ ತೋಟ ಲೀಸ್ ಗೆ ಪಡೆದು ಟ್ಯಾಪಿಂಗ್ ನಡೆಸುತಿದ್ದರು. ಹಾಗಾಗಿ ಇಲ್ಲಿಯ ವಿಳಾಸ ನೀಡಿ ಆಧಾರ್ ಕಾರ್ಡ್ ಕೂಡ ಮಾಡಿಸಿಕೊಂಡಿದ್ದರು. ಈ ಆಧಾರ್ ಕಾರ್ಡ್ ನ್ನು ವಿಳಾಸ ದಾಖಲೆಯಾಗಿ ನೀಡಿ ಚಾರ್ವಾಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆದಿದ್ದರು.

- Advertisement -

Related news

error: Content is protected !!