Saturday, June 6, 2026
spot_imgspot_img
spot_imgspot_img

ಕಾಣಿಯೂರು: ಹೊಳೆ ನೀರಿನಲ್ಲಿ ಮುಳುಗಿ ಮೃತಪಟ್ಟ ಮಗು!

- Advertisement -
- Advertisement -

ಕಾಣಿಯೂರು: ಒಂದೂವರೆ ವರ್ಷದ ಮಗುವೊಂದು ಹೊಳೆ ನೀರಿನಲ್ಲಿ ಮುಳುಗಿ ಮೃತಪಟ್ಟ ಆಘಾತಕಾರಿ ಘಟನೆ ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಪುಣ್ಚತ್ತಾರಿನಲ್ಲಿ ನಡೆದಿದೆ.

ಮುರುಳ್ಯ ಗ್ರಾಮದ ಪೊಗ್ಗೊಳಿ ನಿವಾಸಿಗಳಾಗಿದ್ದು ಪ್ರಸ್ತುತ ಪುಣ್ಚತ್ತಾರಿನಲ್ಲಿ ವಾಸಿಸುತ್ತಿರುವ ಪ್ರೇಮ-ಚಂದ್ರಶೇಖರ ರೈ ಅವರ ಒಂದೂವರೆ ವರ್ಷ ಪ್ರಾಯದ ಮಗು ಗ್ರೀಷ್ಮಾ ಮೃತಪಟ್ಟ ಮಗು.

ಬಟ್ಟೆ ಒಗೆಯಲು ಮನೆಯವರು ಪುಣ್ಚತ್ತಾರು ಎಂಬಲ್ಲಿ ಹರಿಯುವ ಹೊಳೆಗೆ ಹೋಗಿದ್ದ ವೇಳೆ ಮಗುವನ್ನೂ ಜೊತೆಗೆ ಕರೆದೊಯ್ದಿದ್ದರು. ಹೊಳೆ ಬದಿ ನೀರಿನಲ್ಲಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ನೀರಲ್ಲಿ ಮುಳುಗಿದ್ದ ಮಗುವನ್ನು ತಂದೆ ಚಂದ್ರಶೇಖರ ರೈ ಹಾಗೂ ಇತರರು ನೀರಿನಿಂದ ಮೇಲಕ್ಕೆತ್ತಿ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಆ ವೇಳೆಗಾಗಲೇ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!