Saturday, April 20, 2024
spot_imgspot_img
spot_imgspot_img

ಕಾಪು: ಹಿಂದೂ ದೇವರ ಚಿತ್ರವನ್ನು ರಂಗೋಲಿಯಿಂದ ಬಿಡಿಸಿದ ಮುಸ್ಲಿಂ ಯುವಕ

- Advertisement -G L Acharya panikkar
- Advertisement -

ಕಾಪು: ಹಿಂದೂ ದೇವರ ಚಿತ್ರವನ್ನು ರಂಗೋಲಿಯಿಂದ ಬಿಡಿಸಿದ ಮುಸ್ಲಿಂ ಯುವಕನ ಕಲೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಯುವಕ ಬಿಡಿಸಿದ ಈ ಚಿತ್ರವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಈ ಯುವಕ ಕಾಪು ತಾಲ್ಲೂಕಿನ ಮಲ್ಲಾರು ರಾಣ್ಯಕೇರಿ ನಿವಾಸಿ ಅಬ್ದುಲ್ ಕರೀಂ ಅವರ ಪುತ್ರ ಅಲಿ ಮಲ್ಲಾರ್. ಇವರು ಬಿಕಾಂ ಪದವಿ ಮುಗಿಸಿ ಗಾರ್ಡನ್ ವೃತ್ತಿಯನ್ನು ನಿರ್ವಹಿಸುತ್ತಿದ್ದು, ಚಿತ್ರ ಕಲೆಯ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ.

ಈಗಾಗಲೇ ಇವರು ಗಣಪತಿ, ಕಟಿಲೇಶ್ವರಿ, ಎಲ್ಲಮ್ಮ, ಕೊಲ್ಲೂರು ಶ್ರೀ ಮೂಕಾಂಬಿಕೆ, ಅಯ್ಯಪ್ಪ ಸ್ವಾಮಿ ಹೀಗೆ ಹಲವಾರು ದೇವರುಗಳ ಚಿತ್ರಗಳನ್ನು ರಂಗೋಲಿ ಹಾಗು ತ್ರೆಡ್ ಆರ್ಟ್ ಮೂಲಕ ಬಿಡಿಸಿದ್ದಾರೆ. ಸತತ ಎರಡು ವರ್ಷಗಳ ಪ್ರಯತ್ನದ ಫಲವಾಗಿ ರಂಗೋಲಿ ಮೂಲಕ ಚಿತ್ರ ಬಿಡಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಅಲಿ ಮಲ್ಲಾರ್. ಕಾಪುವಿನ ಶ್ರೀ ಲಕ್ಷ್ಮೀ ಜನಾರ್ದನ ಸಭಾ ಭವನದಲ್ಲಿ ಇವರ ರಂಗೋಲಿ ಕಲೆಯನ್ನು ವೀಕ್ಷಿಸಿದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!