Saturday, June 20, 2026
spot_imgspot_img
spot_imgspot_img

ಕಾರ್ಕಳ: ಮೇಯಲು ಬಂದ ದನದ ಕಾಲು ಕಡಿದ ಮಹಿಳೆ; ವಾರಸುದಾರರಿಗೆ ಜೀವ ಬೆದರಿಕೆ

- Advertisement -
- Advertisement -

ಕಾರ್ಕಳ: ಗದ್ದೆಗೆ ಬಂದು ಮೇಯುತ್ತಿದ್ದ ದನವೊಂದರ ಕಾಲು ಕಡಿದ ಘಟನೆ ಕಾರ್ಕಳದ ಎರ್ಲಪ್ಪಾಡಿ ಗ್ರಾಮದಲ್ಲಿ ನಡೆದಿದೆ. ಎರ್ಲಪ್ಪಾಡಿಯ ಸಂತೋಷ್ ಹೆಗ್ಡೆ ಎಂಬವರಿಗೆ ಸೇರಿದ್ದ ದನ ಅಮಣ್ಣಿ ಹೆಗ್ಡೆ ಎಂಬವರ ಗದ್ದೆಗೆ ಹೋಗಿದ್ದು, ಇದರಿಂದ ಕುಪಿತಗೊಂಡ ಅಮಣ್ಣಿ ಕತ್ತಿಯಿಂದ ದನದ ಕಾಲು ಕಡಿದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದೇ ವಿಚಾರವನ್ನು ಮುಂದಿಟ್ಟು ದೂರುದಾರ ಸಂತೋಷ್ ಕುಮಾರ್ ಹೆಗ್ಡೆಗೆ ಅಮಣ್ಣಿಯ ಮೂವರು ಮಕ್ಕಳು ಜೀವಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!