ವೀರಕಂಭ :ಪಡೀಲ್ -ಸೀನಾಜೆ ಕಾಂಕ್ರೀಟಿಕರಣಕ್ಕೆ ಬಂಟ್ವಾಳ ಶಾಸಕರಿಂದ 10 ಲಕ್ಷ ಅನುದಾನ, ಭೂಮಿ ಪೂಜೆ.






ಮಾಣಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ವೀರಕಂಭ ಶಕ್ತಿ ಕೇಂದ್ರಕ್ಕೆ ಶಾಸಕ ಶ್ರೀ ರಾಜೇಶ್ ನಾಯ್ಕ್ ಅವರ ವಿಶೇಷ ಅನುದಾನ 10 ಲಕ್ಷ ಬಿಡುಗಡೆ ಆಗಿದ್ದು ಆ ನಿಟ್ಟಿನಲ್ಲಿ ಇಂದು ವೀರಕಂಭ ಗ್ರಾಮದ ಪಡೀಲ್ ಎಂಬಲ್ಲಿ ಪಡೀಲ್-ಸೀನಾಜೆ ಸರ್ವಋತು ರಸ್ತೆಗೆ ಗುದ್ದಲಿ ಪೂಜೆ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದಿನೇಶ್ ಆಮ್ಟೂರು,ಮಂಡಲ ಕಾರ್ಯದರ್ಶಿ ಸನತ್ ಕುಮಾರ್ ರೈ,ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ನಾಗೇಶ್ ಭಂಡಾರಿ,, ನೇರಳಕಟ್ಟೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ,ಬಂಟ್ವಾಳ ಯುವ ಮೋರ್ಚಾ ಉಪಾಧ್ಯಕ್ಷರಾದ ಸಂದೀಪ್ ಪೂಜಾರಿ , ಬೂತ್ ಅಧ್ಯಕ್ಷರಾದ ಸಂದೇಶ್ ಪೂಜಾರಿ,ವಿರಕಂಭ ಹಾಲು ಸೊಸೈಟಿ ಅಧ್ಯಕ್ಷರಾದ ಶ್ರೀಮತಿ ತೇಜಾಕ್ಷಿ,ಉಪಾಧ್ಯಕ್ಷರಾದ ರಜನೀಶ್ ,ಗುತ್ತಿಗೆದಾರ ಶ್ರೀ ನಾಗೇಶ್ ಕುಲಾಲ್ ಸ್ಥಳೀಯರಾದ ವಿಶ್ವನಾಥ್ ಪೂಜಾರಿ ಸೇರಿದಂತೆ ಬೂತ್ ಸಮಿತಿಯ ಸದಸ್ಯರು ಮಹಿಳಾ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.







