Monday, August 10, 2026
spot_imgspot_img
spot_imgspot_img

ಕಾರ್ಕಳ: ಬಸ್ ಹತ್ತುವ ವೇಳೆ ಕೈ ಜಾರಿ ಬಿದ್ದ ವೃದ್ದ ದಾರುಣ ಸಾವು

- Advertisement -
- Advertisement -

ಕಾರ್ಕಳ : ಬಸ್ ಹತ್ತುವ ವೇಳೆ ವೃದ್ಧರೊಬ್ಬರು ಕೈಜಾರಿ ರಸ್ತೆಗೆ ಬಿದ್ದು, ಬಸ್ ನ ಹಿಂಬದಿ ಚಕ್ರ ಅವರ ಕಾಲ ಮೇಲೆ ಹರಿದ ದಾರುಣ ಘಟನೆ ತಾಲೂಕಿನ ಹಿರ್ಗಾನ ಬಸ್ ನಿಲ್ದಾಣ ಬಳಿ ನಡೆದಿದೆ.

ಹಿರ್ಗಾನ ಚಿಕ್ಕಲ್ಬೆಟ್ಟಿನ ಕಣಿಲ ನಿವಾಸಿ ಕೃಷ್ಣ ನಾಯಕ್ ಗಾಯಗೊಂಡ ವ್ಯಕ್ತಿ. ಇವರು ಹಿರ್ಗಾನದಿಂದ ನೆಲ್ಲಿಕಟ್ಟೆಗೆ ಹೋಗಲು ಖಾಸಗಿ ಬಸ್ ಗೆ ಹತ್ತುತಿದ್ದರು. ಈ ವೇಳೆ ಕೈ ಜಾರಿ ರಸ್ತೆಗೆ ಬಿದ್ದಿದ್ದು, ಬಸ್ ನ ಹಿಂದಿನ ಚಕ್ರವು ಅವರ ಕಾಲಿನ ಮೇಲೆ ಹರಿದಿದೆ ಎನ್ನಲಾಗಿದೆ. ಇದರಿಂದ ಅವರ ಕಾಲು ಜಖಂ ಆಗಿದ್ದು, ವಿಪರೀತ ರಕ್ತಸ್ರಾವವಾಗಿದೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿ, ಓರ್ವ ಪುತ್ರನನ್ನು ಅಗಲಿದ್ದಾರೆ.

- Advertisement -

Related news

error: Content is protected !!