Wednesday, October 7, 2026
spot_imgspot_img
spot_imgspot_img

ಕಾರ್ಕಳ: ಮಂಗನನ್ನು ಓಡಿಸಲು ಹೋಗಿ ಎಡವಟ್ಟಿನಿಂದ ತನಗೇ ತಾನು ಶೂಟ್ ಮಾಡಿಕೊಂಡ..! ಪ್ರಾಣಾಪಾಯದಿಂದ ಪಾರು

- Advertisement -
- Advertisement -

ಕಾರ್ಕಳ : ವ್ಯಕ್ತಿಯೋರ್ವರಿಗೆ ಆಕಸ್ಮಿಕವಾಗಿ ಕೋವಿಯಿಂದ ಗುಂಡು ಹಾರಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ ಕುಕ್ಕುಜೆ ಎಂಬಲ್ಲಿ ನಡೆದಿದೆ.

ಆ. 2ರ ಬೆಳಿಗ್ಗೆ ಸಂಜೀವ ಪೂಜಾರಿ ಎಂಬವರ ತೋಟದಲ್ಲಿ ಕೆಲಸ ಮಾಡಿಕೊಂಡಿರುವ ವ್ಯಕ್ತಿ ಕರುಣಾಕರ್ ಎಂಬವರು ತೋಟದಲ್ಲಿದ್ದ ಮಂಗನನ್ನು ಓಡಿಸುವ ಸಲುವಾಗಿ ಕೋವಿ ಹಿಡಿದು ಹೊರಟಾಗ ಕಾಲಿಗೆ ಕಲ್ಲು ತಾಗಿ ಎಡವಿದ್ದು ಕೈಯಲ್ಲಿದ್ದ ಕೋವಿಯಿಂದ ಗುಂಡು ಹಾರಿ ಕಿವಿ ಭಾಗಕ್ಕೆ ಗಾಯವಾಗಿರುತ್ತದೆ. ಕರುಣಾಕರ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಅಜೆಕಾರು ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!