Wednesday, June 17, 2026
spot_imgspot_img
spot_imgspot_img

ಕಾರ್ಕಳ: ಅಮಲು ಪದಾರ್ಥ ನೀಡಿ ಕಾಲೇಜು ಯುವತಿಯ ಅತ್ಯಾಚಾರ- ಉಪ್ಪಿನಂಗಡಿ ಮೂಲದ ಯುವಕನ ಮೇಲೆ ದೂರು ದಾಖಲು!

- Advertisement -
- Advertisement -

ಕಾರ್ಕಳ: ಕಾಲೇಜು ಯುವತಿಯನ್ನು ಕಾರಿನಲ್ಲಿ ಕರೆದೊಯ್ದು ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಯುವತಿ ಕಾಲೇಜಿಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಆಕೆಯ ದೊಡ್ಡಪ್ಪನ ಪರಿಚಯದ ಉಪ್ಪಿನಂಗಡಿ ನಿವಾಸಿಯಾದ ಪ್ರಾಣೇಶ್ ಎಂಬಾತ ಅದೇ ಮಾರ್ಗದಲ್ಲಿ ಕಾರಿನಲ್ಲಿ ಬಂದಿದ್ದು, ಡ್ರಾಪ್ ಕೊಡುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದಾನೆ.

ಆಕೆ ಇಳಿಯಬೇಕಾದ ಸ್ಥಳ ಬಂದರೂ ಕಾರನ್ನು ನಿಲ್ಲಿಸದೆ ಉಪ್ಪಿನಂಗಡಿ ಕಡೆಗೆ ಕಾರನ್ನು ಚಲಾಯಿಸಿದ್ದು ಬಳಿಕ ಕಾರಿನಲ್ಲೇ ಅಮಲು ಬರುವ ಜ್ಯೂಸ್ ನೀಡಿ ಮನೆಯೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಅತ್ಯಾಚಾರದ ವಿಡಿಯೋ ಚಿತ್ರೀಕರಿಸಿ ಘಟನೆ ಕುರಿತು ಹೊರಗಡೆ ಹೇಳಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಬಳಿಕ ಯುವತಿ ಕಾರ್ಕಳಕ್ಕೆ ಕಂಪ್ಯೂಟರ್ ಕ್ಲಾಸಿಗೆ ಬಂದಿದ್ದ ವೇಳೆ ಬೈಲೂರಿಗೆ ಬರುವಂತೆ ಬೆದರಿಸಿದ್ದಾನೆ. ಯುವತಿ ಭಯದಿಂದ ಬೈಲೂರಿಗೆ ಹೋಗಿದ್ದು ಅಲ್ಲಿಗೆ ಬಂದ ಪ್ರಾಣೇಶ್ ಆಕೆಯನ್ನು ಗುಡ್ಡೆಯಂಗಡಿ ಬಳಿ ಕರೆದೊಯ್ದು ಮತ್ತೊಮ್ಮೆ ಅತ್ಯಾಚಾರ ನಡೆಸಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಯುವತಿಯ ದೂರನ್ನು ಸ್ವೀಕರಿಸಿರುವ ಕಾರ್ಕಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!