Sunday, June 14, 2026
spot_imgspot_img
spot_imgspot_img

ಕಾರ್ಕಳ: ಕಾರಿನ ಬಾಗಿಲು ಬಡಿದು ಸ್ಕೂಟರ್‍ ಸವಾರ ಮೃತ್ಯು..!

- Advertisement -
- Advertisement -

ಕಾರ್ಕಳ: ರಸ್ತೆಯಲ್ಲಿ ತೆರಳುತ್ತಿದ್ದ ವಾಹನ ಗಮನಿಸದೆ ಕಾರಿನ ಬಾಗಿಲು ತೆರೆದ ಪರಿಣಾಮ ಸ್ಕೂಟರಿನಲ್ಲಿ ತೆರಳುತ್ತಿದ್ದ ಸವಾರ ಬಿದ್ದು ತೀವ್ರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಕಾರ್ಕಳ ಕಸಬಾ ಗ್ರಾಮದ ಅಂಗಡಿಯೊಂದರ ಮುಂದೆ ನಡೆದಿದೆ.

ಮೃತಪಟ್ಟ ವ್ಯಕ್ತಿ ಸ್ಕೂಟರ್ ಸವಾರ ಯಶವಂತ ಎಂದು ಗುರುತಿಸಲಾಗಿದೆ.

ರಸ್ತೆ ಬದಿ ಕಾ‌ರ್ ಅನ್ನು ಅದರ ಚಾಲಕ ರಸ್ತೆ ಬದಿ ನಿಲ್ಲಿಸಿದ್ದ. ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಗಮನಿಸದೇ ನಿರ್ಲಕ್ಷ್ಯತನದಿಂದ ತನ್ನ ಕಾರಿನ ಬಲಬದಿಯ ಬಾಗಿಲನ್ನು ತೆರೆದ ಪರಿಣಾಮ ಸಾಲ್ಮರ ಕಡೆಯಿಂದ ತಾಲೂಕು ಕಚೇರಿಯ ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್ ಸವಾರನಿಗೆ ಕಾರಿನ ಬಾಗಿಲು ಬಡಿದು ಅವರು ಸ್ಕೂಟರ್‌ನಿಂದ ರಸ್ತೆಗೆ ಬಿದ್ದಿದ್ದಾರೆ.

ಈ ವೇಳೆ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗೊಂಡ ಸವಾರ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!