




ಬೆಂಗಳೂರು: ಗೃಹಲಕ್ಷ್ಮಿ ಹಣದ ದುರುಪಯೋಗ ತಡೆಗಟ್ಟಲು ಬಯೋಮೆಟ್ರಿಕ್ ಜಾರಿಗೆ ತರಲು ಸರ್ಕಾರ ನಿರ್ಧಾರ ಮಾಡಿದ್ದು, ಮುಂದಿನ ತಿಂಗಳಿನಿಂದ ಬಯೋಮೆಟ್ರಿಕ್ ಜಾರಿ ಆಗಲಿದೆ.
ಬಯೋಮೆಟ್ರಿಕ್‌ಗೆ ಗೃಹಲಕ್ಷ್ಮಿ ಫಲಾನುಭವಿಗಳು ಶುಲ್ಕವನ್ನು ಪಾವತಿ ಮಾಡಬೇಕಿದೆ. ಬಯೋಮೆಟ್ರಿಕ್ ಆಗದೇ ಇದ್ದರೆ 2 ಸಾವಿರ ರೂ. ಬರುವುದಿಲ್ಲ. ಹೀಗಾಗಿ ಬಯೋಮೆಟ್ರಿಕ್ ಮಾಡಿಸಿಕೊಳ್ಳಲು ಪ್ರತಿ ಫಲಾನುಭವಿ 5 ರೂ. ಶುಲ್ಕವನ್ನು ಪಾವತಿ ಮಾಡಬೇಕಿದೆ.
ಬಯೋಮೆಟ್ರಿಕ್ ಜೊತೆಗೆ ಗೃಹಲಕ್ಷ್ಮಿ ಸೊಸೈಟಿಗೆ ಸದಸ್ಯತ್ವವನ್ನ ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡಿಕೊಳ್ಳುತ್ತಿದ್ದು, ಸದಸ್ಯತ್ವ ಬಯಸುವ ಫಲಾನುಭವಿಗಳು 1,250 ರೂ. ಪಾವತಿ ಮಾಡಬೇಕಿದೆ. ಒಂದು ವೇಳೆ ಗೃಹಲಕ್ಷ್ಮಿ ಸೊಸೈಟಿ ಸದಸ್ಯತ್ವ ಬೇಡ ಅಂದರೆ ಬಯೋಮೆಟ್ರಿಕ್ ಅಷ್ಟೇ ಮಾಡಿಸಿಕೊಳ್ಳಬಹುದು. ಮುಂದಿನ ತಿಂಗಳ ಒಳಗಡೆ ಬಯೋಮೆಟ್ರಿಕ್ ಜಾರಿ ಮಾಡುವ ಚಿಂತನೆಯಲ್ಲಿದ್ದು, ಈಗಾಗಲೇ ಗೃಹಲಕ್ಷ್ಮಿ ಬಯೋಮೆಟ್ರಿಕ್‌ಗಾಗಿ ಆಪ್ ಸಿದ್ಧಪಡಿಸಲಾಗುತ್ತಿದೆ ಎಂಬುದಾಗಿ ವರದಿಯಿಂದ ತಿಳಿದುಬಂದಿದೆ.
ಬಯೋಮೆಟ್ರಿಕ್ ಮಾಡಿಸುವ ವಿಧಾನ:
1. ಬೆಂಗಳೂರು ಒನ್, ಗ್ರಾಮ ಒನ್‌ಗಳಲ್ಲಿ ಬಯೋಮೆಟ್ರಿಕ್‌ಗೆ ಅವಕಾಶ ಸಾಧ್ಯತೆ
2. ಒನ್ ಟೈಂ ಬಯೋಮೆಟ್ರಿಕ್: ಒಂದು ಸಲ ಬಯೋಮೆಟ್ರಿಕ್ ನೀಡಿದ್ರೆ ವ್ಯಕ್ತಿಯ ಖಚಿತತೆಯಿಂದ 2 ಸಾವಿರ ರೂ. ಪಾವತಿ
3. ಗ್ರಾಮ ಒನ್, ಬೆಂಗಳೂರು ಒನ್, ಸೇವಾಸಿಂಧು ಕೇಂದ್ರಗಳಿಗೆ ತೆರಳಿ ಬಯೋಮೆಟ್ರಿಕ್ ನೀಡಬೇಕು
4. ಗೃಹಲಕ್ಷ್ಮಿ ಬಯೋಮೆಟ್ರಿಕ್‌ಗೆ 5 ರೂ. ಶುಲ್ಕವನ್ನ ಮಹಿಳಾ ಇಲಾಖೆ ನಿಗದಿ ಮಾಡಲಿದೆ
5. ಬಯೋಮೆಟ್ರಿಕ್‌ಗೆ ಫಲಾನುಭವಿಗಳು ಆಧಾರ್ ಕಾರ್ಡ್ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.








