Wednesday, May 8, 2024
spot_imgspot_img
spot_imgspot_img

ಬಸ್ ಮೇಲೆ ಕಲ್ಲು ಎಸೆದ ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ-ಬಸವರಾಜ್ ಬೊಮ್ಮಾಯಿ

- Advertisement -G L Acharya panikkar
- Advertisement -

ಬೆಂಗಳೂರು: ಶಾಂತಿಯುತವಾದ ಪ್ರತಿಭಟನೆಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಹೈ ಕೋರ್ಟ್​ ಸಹ ಸುಪ್ರೀಂ ಕೋರ್ಟ್​ ತೀರ್ಪಿನಂತೆ ಸಲಹೆ ನೀಡಿದೆ. ಆದ್ದರಂತೆ ನಾವು ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಂಡಿದ್ದೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

ರಾಜ್ಯದಲ್ಲಿ ಇಂದು 2-3 ಕಡೆ ಮಾತ್ರ ಬಸ್ ಮೇಲೆ ಕಲ್ಲು ಎಸೆದ ಘಟನೆ ನಡೆದಿದೆ. ಬೈಕ್​​ನಲ್ಲಿ ಬಂದು ಕಲ್ಲು ಎಸೆದಿದ್ದು, ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದರು.ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಬರುವ ಸೂಚನೆ ಇದ್ದು, ನಾವು ಮತ್ತಷ್ಟು ಎಚ್ಚರಿಕೆಯಿಂದ ಇರಬೇಕು. ರಾಜ್ಯ ಅಥವಾ ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಜಾರಿ ಬಗ್ಗೆ ಇನ್ನು ಚರ್ಚೆ ಮಾಡಿಲ್ಲ. ಸಿಎಂ, ಆರೋಗ್ಯ ಸಚಿವರೊಂದಿಗೆ ಚರ್ಚೆ ನಡೆಸಿ ಕ್ರಮಕೈಗೊಳ್ಳುತ್ತೇವೆ ಎಂದರು.

ಹೋ ಹತ್ಯೆ ನಿಷೇಧ 60ರ ದಶಕದ ಬೇಡಿಕೆ ಆಗಿದ್ದು, ಈ ಬಗ್ಗೆ ಪರಿಣಾಮಕಾರಿಯದ ಕಾಯ್ದೆಯನ್ನು ಸದನದಲ್ಲಿ ಜಾರಿ ಮಾಡಲಾಗುವುದು. ಈ ಹಿಂದೆ 2012 ರಲ್ಲಿ ಕಾಯ್ದೆ ಜಾರಿ ಮಾಡಿದ್ದ ವೇಳೆ ಕಾಂಗ್ರೆಸ್​​ ಆಡಳಿತದಲ್ಲಿದ್ದ ರಾಜ್ಯಪಾಲರು ವಿರೋಧ ಮಾಡಿದ್ದರು. ಎಳೆ ಕರುಗಳಿಂದ ಹಸುಗಳನ್ನು ಹತ್ಯೆ ಮಾಡಲಾಗುತ್ತಿತ್ತು. ಆದ್ದರಿಂದ ನಾವು ಇದೇ ಅಧಿವೇಶನದಲ್ಲಿ ಕಾಯ್ದೆ ಜಾರಿ ಮಾಡುವ ಉದ್ದೇಶವಿದೆ ಎಂದು ಸ್ಪಷ್ಟಪಡಿಸಿದರು.

ಲವ್ ಜಿಹಾದ್ ವಿರುದ್ಧವೂ ಕಾನೂನು ತರುವ ಕಾರ್ಯ ನಡೆಯುತ್ತಿದೆ. ಮೊದಲು ವರದಕ್ಷಿಣೆ ಇತ್ತು, ಇದರಿಂದ ವರದಕ್ಷಿಣೆ ಕಿರುಕುಳ, ಹತ್ಯೆ ಮಾಡುವುದು ಆರಂಭವಾಯಿತು. ಲವ್ ಜಿಹಾದ್ ಕೂಡ ಇದೇ ರೀತಿ ಎಷ್ಟೇ ಹೆಣ್ಣು ಮಕ್ಕಳು, ಪೋಷಕರು ಇದರಿಂದ ಸಮಸ್ಯೆ, ನೋವು ಅನುಭವಿಸಿದ್ದಾರೆ. ಆದ್ದರಿಂದ ಮತಾಂತರ ಆಗಬಾರದು ಎಂಬುವುದು ನಮ್ಮ ಉದ್ದೇಶ. ಈಗಾಗಲೇ ಯುಪಿಯಲ್ಲಿ ಈ ಬಗ್ಗೆ ಸುಗ್ರೀವಾಜ್ಞೆ ಜಾರಿ ಆಗಿದ್ದು, ಆದರ ಪ್ರತಿಯನ್ನು ತರಿಸಿಕೊಂಡಿದ್ದೇವೆ ಎಂದು ತಿಳಿಸಿದರು.

- Advertisement -

Related news

error: Content is protected !!