Friday, August 21, 2026
spot_imgspot_img
spot_imgspot_img

ಕರ್ನಾಟಕದತ್ತ ಓವೈಸಿಯ ಚಿತ್ತ.?-ಸದಸ್ಯತ್ವ ಅಭಿಯಾನಕ್ಕೆ ಶೀಘ್ರ ಚಾಲನೆ

- Advertisement -
- Advertisement -

ಬೆಂಗಳೂರು: ಕರ್ನಾಟಕದಲ್ಲಿ ನಡೆಯುವ ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಓವೈಸಿ ನೇತೃತ್ವದ AIMIM ಸ್ಪರ್ದಿಸಲು ಚಿಂತನೆ.


ಇದರ ಭಾಗವಾಗಿ ಶೀಘ್ರದಲ್ಲೇ ಅಧಿಕ ಮುಸ್ಲಿಂ ಪ್ರಾಭಲ್ಯವುಳ್ಳ ದಕ್ಷಿಣ ಕನ್ನಡ ಜಿಲ್ಲೆಗೆ ಅಸಾದುದ್ದೀನ್ ಓವೈಸಿಯವರು ಆಗಮಿಸಲಿದ್ದು, ಜಿಲ್ಲೆಯಲ್ಲಿ ತನ್ನ ಪಕ್ಷದ ಹಿತೈಷಿಗಳ ಬೃಹತ್ ಸಭೆ ಏರ್ಪಡಿಸಿ ತನ್ನ ಪಕ್ಷದ ಕಾರ್ಯಪ್ರವೃತ್ತಿಯನ್ನು ಆರಂಭಿಸಲಿದ್ದಾರೆ ಮತ್ತು ಬಿರುಸಿನ ಸದಸ್ಯತ್ವ ಅಭಿಯಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಮುನ್ನುಡಿ ಬರೆಯಲಿದ್ದಾರೆ ಎಂದು ತಿಳಿದುಬಂದಿದೆ.

ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ದಿಸಿ ಯಶಸ್ಸು ಕಂಡಿರುವ AIMIM
ಕರ್ನಾಟಕ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ದಿಸಿ ತಳಮಟ್ಟದಿಂದಲೇ ಪಕ್ಷವನ್ನು ಬಲಪಡಿಸುವ ಚಿಂತನೆ ಕೂಡ ನಡೆಸಿದೆ ಎಂದು ತಿಳಿದುಬಂದಿದೆ.

ಪ್ರಥಮ ಅವಧಿಯಲ್ಲಿ ಮುಸ್ಲಿಂ ಬಾಹುಳ್ಯದ ಕ್ಷೇತ್ರಗಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

- Advertisement -

Related news

error: Content is protected !!