- Advertisement -
- Advertisement -
ಪುತ್ತೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಜಾಗರಣಾ ವೇದಿಕೆ ಪುತ್ತೂರು ತಾಲೂಕು ಕಾರ್ಯದರ್ಶಿಯಾಗಿದ್ದ ದಿ.ಕಾರ್ತಿಕ್ ಮೇರ್ಲ ಅವರ ಸ್ಮರಣಾರ್ಥ ಸಂಪ್ಯದಲ್ಲಿ ಸಾರ್ವಜನಿಕ ಬಸ್ ತಂಗುದಾಣ ನಿರ್ಮಾಣವಾಗಿದ್ದು ಸೆ.3ರಂದು ಕಾರ್ತಿಕ್ ಮೇರ್ಲ ಅವರ ತಂದೆ ರಮೇಶ್ ಸುವರ್ಣ, ತಾಯಿ ಹೇಮಾವತಿ ಅವರು ಲೋಕಾರ್ಪಣೆ ಮಾಡಿದರು.
ಹಿಂಜಾವೇ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಆಳ್ವ, ಹಿಂಜಾವೇ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಜಿಲ್ಲಾ ಸಂಪರ್ಕ ಪ್ರಮುಖರಾದ ನರಸಿಂಹ ಶೆಟ್ಟಿ, ನವೀನ್ ಕೈಕಾರ, ನ್ಯಾಯವಾದಿ ಮಹೇಶ್ ಕಜೆ, ಮಾಜಿ ಪ್ರಾಂತ ಸಹ ಸಂಚಾಲಕ ಸತ್ಯಜೀತ್ ಸುರತ್ಕಲ್, ನ್ಯಾಯವಾದಿ ಕಿಶೋರ್, ನ್ಯಾಯವಾದಿ ಚಿನ್ಮಯ್ ರೈ ಈಶ್ವರಮಂಗಲ, ಪೂಜಾ ಸತೀಶ, ರಾಜಾರಾಮ್ ಭಟ್, ಕಾರ್ತಿಕ್ ಮೇರ್ಲ ಅವರ ಸಹೋದರ ದೀಪಕ್ , ರತ್ನಾಕರ ಶೆಟ್ಟಿ ಕಲ್ಲಡ್ಕ, ಅಮಿತ್, ಸೇರಿದಂತೆ ಹಿಂಜಾವೇಯ ಪದಾಧಿಕಾರಿಗಳು, ಸದಸ್ಯರು ಹಾಗೂ ಇನ್ನಿತರ ಗಣ್ಯರು ಭಾಗಿಯಾಗಿದ್ದರು.
- Advertisement -