Saturday, May 4, 2024
spot_imgspot_img
spot_imgspot_img

ಕಾಸರಗೋಡು : ಶಾಲಾ ವಾಹನದಡಿಗೆ ಬಿದ್ದು ಬಾಲಕಿ ಮೃತ್ಯು

- Advertisement -G L Acharya panikkar
- Advertisement -

ಕಾಸರಗೋಡು : ಶಾಲಾ ವಾಹನದಡಿಗೆ ಬಿದ್ದು ನರ್ಸರಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಕಾಸರಗೋಡಿನ ಕಂಬಾರ್ ಸಿರಿಬಾಗಿಲು ಎಂಬಲ್ಲಿ ನಡೆದಿದೆ.

ಸಿರಿ ಬಾಗಿಲಿನ ಮುಹಮ್ಮದ್ ಸುಬೈರ್ ಎಂಬವರ ಪುತ್ರಿ ಆಯಿಷಾ ಸೆಯಾ (4) ಮೃತ ವಿದ್ಯಾರ್ಥಿನಿ. ಮನೆ ಸಮೀಪ ಈ ದುರಂತ ನಡೆದಿದೆ. ಶಾಲೆ ಬಿಟ್ಟು ಮನೆ ಬಳಿ ಬಾಲಕಿಯನ್ನು ಇಳಿಸಿ ಬಸ್ಸನ್ನು ಹಿಂದಕ್ಕೆ ತೆಗೆಯುತ್ತಿದ್ದಾಗ ಅದೇ ಬಸ್ಸಿನಡಿ ಸಿಲುಕಿ ಈ ಘಟನೆ ನಡೆದಿದೆ.

ಸ್ಥಳೀಯರು ಧಾವಿಸಿ ಬಂದು ಕೂಡಲೇ ವಿದ್ಯಾರ್ಥಿನಿಯನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಆಗಲೇ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!