- Advertisement -
- Advertisement -



ಕಾಸರಗೋಡು: ಮಿನಿ ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 1645 ಲೀಟರ್ ಸ್ಪಿರಿಟ್ನ್ನು ಕಾಸರಗೋಡು ನಗರ ಠಾಣಾ ಪೊಲೀಸರು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನೆಲ್ಲಿಕುಂಜೆಯ ಪ್ರಣವ್ ಶೆಣೈ, ಅಡ್ಕತ್ತಬೈಲ್ನ ಅನೂಶ್ ಹಾಗೂ ಕೊಟ್ಟಾಯಂನ ಥಾಮಸ್ ಎಂದು ಗುರುತಿಸಲಾಗಿದೆ.
ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ರಾಷ್ಟ್ರೀಯ ಹೆದ್ದಾರಿಯ ಅಡ್ಕತ್ತಬೈಲ್ನಲ್ಲಿ ವಾಹನ ತಪಾಸಣೆ ನಡೆಸಿ ಅಕ್ರಮ ಸಾಗಾಟ ಪತ್ತೆ ಹಚ್ಚಿದ್ದಾರೆ. ಮಂಗಳೂರಿನಿಂದ ಎರ್ನಾಕುಲಂಗೆ ಸ್ಪಿರಿಟನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
- Advertisement -








