Friday, May 3, 2024
spot_imgspot_img
spot_imgspot_img

ಕಾಸರಗೋಡು: ಯುವತಿಯನ್ನು ಬರ್ಬರವಾಗಿ ಕೊಲೆಗೈದು ಪೊಲೀಸರಿಗೆ ಶರಣಾದ ಪ್ರಿಯಕರ

- Advertisement -G L Acharya panikkar
- Advertisement -

ಕಾಸರಗೋಡು: ಯುವತಿಯೊಬ್ಬಳನ್ನು ಪ್ರಿಯಕರ ಬರ್ಬರವಾಗಿ ಕೊಲೆಗೈದು ಪೊಲೀಸರಿಗೆ ಶರಣಾದ ಘಟನೆ ಕೇರಳದ ಕಾಞ೦ಗಾಡ್ ನಲ್ಲಿ ನಡೆದಿದೆ.

ಮಾಂಗಾಡ್‌ ನ ದೇವಿಕಾ(34) ಕೊಲೆಯಾದ ಯುವತಿ, ಬೋವಿಕ್ಕಾನದ ಸತೀಶ್ ಭಾಸ್ಕರ್(36) ಕೊಲೆಗೈದ ಆರೋಪಿ. ಕೊಲೆಯ ಬಳಿಕ ಈಕೆಯ ಪ್ರಿಯಕರ ಹೊಸದುರ್ಗ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

ಕಾಞ೦ಗಾಡ್ ನ ಖಾಸಗಿ ಸಂಸ್ಥೆಯಲ್ಲಿ ಸೆಕ್ಯೂರಿಟಿ ಕೆಲಸ ನಿರ್ವಹಿಸುತ್ತಿದ್ದ ಸತೀಶ್ ಹಾಗೂ ದೇವಿಕಾ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಇಬ್ಬರ ಕೌಟುಂಬದವರ ನಡುವೆ ಸಮಸ್ಯೆ ಉಂಟಾಗಿದ್ದು, ದೇವಿಕಾ ವಿರುದ್ದ ಸತೀಶ್ ಭಾಸ್ಕರ್ ನ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಮೇಲ್ಮರಂಬ ಠಾಣಾ ಪೊಲೀಸರು ಎರಡು ಕುಟುಂಬದವರನ್ನು ಕರೆದು ಮಾತುಕತೆ ನಡೆಸಿದರು.

ಇನ್ನು ಸತೀಶ್ ಕಳೆದ ಒಂದು ವಾರದಿಂದ ವಸತಿಗೃಹದಲ್ಲಿ ವಾಸವಾಗಿದ್ದ. ನಿನ್ನೆ ಮಧ್ಯಾಹ್ನ ದೇವಿಕಾಳನ್ನು ವಸತಿಗೃಹಕ್ಕೆ ಕರೆಸಿಕೊಂಡು ಕೊಲೆ ಮಾಡಿದ್ದಾನೆ.ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

- Advertisement -

Related news

error: Content is protected !!