Thursday, July 30, 2026
spot_imgspot_img
spot_imgspot_img

ಕಾಸರಗೋಡು: ವ್ಯಾಪಾರಿಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ದುಷ್ಕರ್ಮಿಗಳು ಪರಾರಿ

- Advertisement -
- Advertisement -

ಕಾಸರಗೋಡು: ಕಾರಿನಲ್ಲಿ ಬಂದ ಇಬ್ಬರು ದುರ್ಷ್ಕಮಿಗಳು ಓಮ್ನಿ ವ್ಯಾನ್‌ನ್ನು ತಡೆದು ವ್ಯಾಪಾರಿಯ ಕುತ್ತಿಗೆಯಲ್ಲಿದ್ದ ಮೂರು ಪವನ್‌ನ ಚಿನ್ನದ ಸರ ಎಗರಿಸಿದ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.

ವರ್ಕಾಡಿ ಅರಿಬೈಲು ನಿವಾಸಿ ಸೀತಾರಾಮ ಶೆಟ್ಟಿ (33) ರವರ ಕುತ್ತಿಗೆಯಲ್ಲಿದ್ದ ಸರವನ್ನು ಎಗರಿಸಲಾಗಿದೆ. ಮೊರತ್ತನೆಯಲ್ಲಿ ಚಿಕನ್ ಸೆಂಟರ್ ಮಾಲಕರಾಗಿರುವ ಸೀತಾರಾಮ ಶೆಟ್ಟಿರವರು ಮಧ್ಯಾಹ್ನ ಅಂಗಡಿಯಿಂದ ವ್ಯಾನ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಕಾರಿನಲ್ಲಿ ಬಂದ ಇಬ್ಬರು ವ್ಯಾನ್‌‌ನ್ನು ತಡೆದು ಕೃತ್ಯ ನಡೆಸಿರುವುದಾಗಿ ದೂರಲಾಗಿದೆ.

ಬಳಿಕ ಕಾರಲ್ಲಿದ್ದವರು ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!