Tuesday, May 7, 2024
spot_imgspot_img
spot_imgspot_img

ಕಾಸರಗೋಡು: ಮಾತನಾಡುತ್ತಿರುವಾಗಲೇ ಮೊಬೈಲ್ ಸ್ಫೋಟ; ವ್ಯಕ್ತಿಗೆ ಗಾಯ

- Advertisement -G L Acharya panikkar
- Advertisement -

ಕಾಸರಗೋಡು: ಮೊಬೈಲ್ ಸ್ಫೋಟಗೊಂಡು ವ್ಯಕ್ತಿಗೆ ಗಾಯವಾಗಿರುವ ಘಟನೆ ಕಾಸರಗೋಡಿನ ಪರಪ್ಪ ಬಳಿ ನಡೆದಿದೆ. ಪಳ್ಳತುಮೂಲೆಯ ರವೀಂದ್ರನ್ ಗಾಯಗೊಂಡವರು.

ಬೆಳಗ್ಗೆ ಮನೆಯಲ್ಲಿ ಅವರು ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಮೊಬೈಲ್ ಸ್ಫೋಟಗೊಂಡಿದೆ. ಇದರಿಂದ ಅವರ ಬಲಕೈಗೆ ಗಾಯಗಳಾಗಿವೆ. ಕರೆ ಬಂದಾಗ ರಿಸೀವ್ ಮಾಡಿದ್ದು, ಈ ಸಂದರ್ಭ ಮೊಬೈಲ್ ನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಗಾಬರಿಗೊಂಡು ಎಸೆಯುತ್ತಿದ್ದಂತೆ ಸ್ಫೋಟಗೊಂಡಿದೆ. ವಿದೇಶದಿಂದ ಸಂಬಂಧಿಕರೋರ್ವರು ಈ ಮೊಬೈಲ್ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.

Insta: glacharyajewellers
Fb: glacharya

- Advertisement -

Related news

error: Content is protected !!