Friday, July 31, 2026
spot_imgspot_img
spot_imgspot_img

ಕಾಸರಗೋಡು: ಸೀಮೆ ಎಣ್ಣೆ ಸೇವಿಸಿ ಮಗುವಿನ ದಾರುಣ ಸಾವು!

- Advertisement -
- Advertisement -

ಕಾಸರಗೋಡು: ಸೀಮೆ ಎಣ್ಣೆ ಸೇವಿಸಿದ ಪರಿಣಾಮ ಒಂದೂವರೆ ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಕಾಸರಗೋಡಿನ ಉದುಮದಲ್ಲಿ ನಡೆದಿದೆ. ಉದುಮ ಏರೋಲ್‌ನ ದಾಸ್ ಮತ್ತು ರೇಣುಕಾ ದಂಪತಿ ಪುತ್ರ ಋತಿಕ್ ಮೃತಪಟ್ಟ ಮಗು.

ಮನೆಯಲ್ಲಿ ಆಟವಾಡುತ್ತಿದ್ದ ಮಗು ಅರಿಯದೆ ಬಾಟಲಿಯಲ್ಲಿದ್ದ ಸೀಮೆ ಎಣ್ಣೆಯನ್ನು ಸೇವಿಸಿದ್ದು, ಮಗು ಅಸ್ವಸ್ಥವಾಗಿ ಬಿದ್ದಿದ್ದು ಸಮೀಪ ಸೀಮೆ ಎಣ್ಣೆ ತುಂಬಿದ್ದ ಬಾಟಲಿ ಪತ್ತೆಯಾಗಿತ್ತು. ತಕ್ಷಣ ಮಗುವನ್ನು ಉದುಮದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ಬಳಿಕ ವೈದ್ಯರ ಸಲಹೆಯಂತೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ. ಪೈಂಟಿಂಗ್‌ಗಾಗಿ ಮನೆ ವರಾಂಡದಲ್ಲಿ ಇಡಲಾಗಿದ್ದ ಸೀಮೆ ಎಣ್ಣೆಯನ್ನು ಮಗು ಅರಿಯದೆ ಸೇವಿಸಿರಬಹುದು ಎಂದು ಶಂಕಿಸಲಾಗಿದೆ.

- Advertisement -

Related news

error: Content is protected !!