Tuesday, April 23, 2024
spot_imgspot_img
spot_imgspot_img

ಭಾರತ – ದುಬೈ ನಡುವಿನ ವಿಮಾನ ಹಾರಾಟ ರದ್ದು!

- Advertisement -G L Acharya panikkar
- Advertisement -

ನವದೆಹಲಿ: ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಮಾರಣಾಂತಿಕ ಹೆಚ್ಚಳದ ನಡುವೆ ಎಮಿರೇಟ್ಸ್ ಭಾನುವಾರದಿಂದ 10 ದಿನಗಳ ಕಾಲ ದುಬೈ ಮತ್ತು ಭಾರತದ ನಡುವಿನ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಿದೆ.

ಬ್ರಿಟನ್ ತನ್ನ ಕಟ್ಟುನಿಟ್ಟಾದ ಪ್ರಯಾಣ ನಿರ್ಬಂಧಗಳನ್ನು ಭಾರತದ ಮೇಲೆ ಹೇರಿದ ಕೆಲವು ದಿನಗಳ ನಂತರ ಮತ್ತು ಪ್ರಧಾನಿ ಬೋರಿಸ್ ಜಾನ್ಸನ್ ನವದೆಹಲಿ ಪ್ರವಾಸವನ್ನು ರದ್ದುಗೊಳಿಸಿದ ಕೆಲವು ದಿನಗಳ ನಂತರ ಗಲ್ಫ್ ರಾಷ್ಟ್ರದ ವಿಮಾನಯಾನ ಸಂಸ್ಥೆ ವಿಮಾನಹಾರಾಟವನ್ನು ನಿಲ್ಲಿಸಲು ಕ್ರಮ ಕೈಗೊಂಡಿದೆ. ಭಾರತದಿಂದ ಬರುವ ಪ್ರಯಾಣಿಕರಿಗೆ 10 ದಿನಗಳ ಕ್ವಾರಂಟೈನ್ ವಿಧಿಸುವುದಾಗಿ ಫ್ರಾನ್ಸ್ ಹೇಳಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಬುಧವಾರ ಸುಮಾರು 10 ಮಿಲಿಯನ್ ಲಸಿಕೆ ಡೋಸ್ ಗಳನ್ನು ನೀಡಿದೆ ಎಂದು ಘೋಷಿಸಿತು. ಲಸಿಕೆ ಹಾಕದೇ ಇರುವವರು ತಮ್ಮ ಚಲನೆಯ ಮೇಲೆ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

driving
- Advertisement -

Related news

error: Content is protected !!