Saturday, May 18, 2024
spot_imgspot_img
spot_imgspot_img

ಕಾಸರಗೋಡು: ಕೋಳಿ ಸಾಕಣೆ ಗೂಡಿನಲ್ಲಿ ಬಚ್ಚಿಡಲಾಗಿದ್ದ 9.5 ಕಿಲೋ ಗಾಂಜಾ ವಶಕ್ಕೆ – ಆರೋಪಿಯ ಬಂಧನ!

- Advertisement -G L Acharya panikkar
- Advertisement -

ಕಾಸರಗೋಡು: ಕೋಳಿ ಸಾಕಣೆ ಗೂಡಿನಲ್ಲಿ ಬಚ್ಚಿಡಲಾಗಿದ್ದ 9. 5 ಕಿಲೋ ಗಾಂಜಾವನ್ನು ಕಾಸರಗೋಡು ಅಬಕಾರಿ ದಳದ ಸಿಬಂದಿಗಳು ವಶಪಡಿಸಿ ಓರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಮಧೂರು ಚಟ್ಟಂಗುಯಿ ಹಿದಾಯತ್ ನಗರದ ಅಬ್ದುಲ್ ರಹಮಾನ್ ಎಂದು ಗುರುತಿಸಲಾಗಿದೆ. ಮನೆ ಸಮೀಪದ ಕೋಳಿ ಗೂಡಿನಲ್ಲಿ ಗಾಂಜಾವನ್ನು ಬಚ್ಚಿಟ್ಟಿದ್ದು , ಅಬಕಾರಿ ದಳದ ಸಿಬ್ಬಂದಿಗಳು ಮನೆಗೆ ದಾಳಿ ನಡೆಸಿದಾಗ ಗಾಂಜಾ ಪತ್ತೆಯಾಗಿದೆ.

ಅಬ್ದುಲ್ ರಹಮಾನ್ ಈ ಹಿಂದೆಯೂ ಮಾದಕ ದ್ರವ್ಯ ಪ್ರಕರಣದ ಆರೋಪಿಯಾಗಿದ್ದು, ಈ ಹಿನ್ನಲೆಯಲ್ಲಿ ಅಬಕಾರಿ ದಳದ ಸಿಬಂದಿಗಳು ಈತನ ಬಗ್ಗೆ ನಿಗಾ ವಹಿಸಿದ್ದರು . ಕೆಲ ದಿನಗಳ ಹಿಂದೆ 13 ಕಿಲೋ ಗಾಂಜಾ ಸಹಿತ ವಡಗರದಿಂದ ಇಬ್ಬರನ್ನು ಬಂಧಿಸಲಾಗಿತ್ತು.

ಇವರನ್ನು ತನಿಖೆ ನಡೆಸಿದಾಗ ಅಬ್ದುಲ್ ರಹಮಾನ್ ಕುರಿತು ಮಾಹಿತಿ ಲಭಿಸಿತ್ತು. ಈ ಹಿನ್ನಲೆಯಲ್ಲಿ ಈತನ ಮನೆಗೆ ದಾಳಿ ನಡೆಸಲಾಗಿತ್ತು. ಆಂಧ್ರಪ್ರದೇಶದಿಂದ ಗಾಂಜಾ ಸಾಗಾಟ ಮಾಡಿ ಕಾಸರಗೋಡು ಜಿಲ್ಲೆಯ ಹಲವೆಡೆ ಚಿಲ್ಲರೆಯಾಗಿ ಈತ ಮಾರಾಟ ಮಾಡುತ್ತಿದ್ದ ಎಂದು ಅಬಕಾರಿ ದಳದ ಸಿಬಂದಿಗಳು ತಿಳಿಸಿದ್ದಾರೆ.

driving
- Advertisement -

Related news

error: Content is protected !!