ಕೆಲಿಂಜ: ಹಳೆ ವಿದ್ಯಾರ್ಥಿ ಸಂಘ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ, ಕೆಲಿಂಜ ಭರತ್ ಕಾರ್ಪೋರೇಷನ್ ಹಾಗೂ ಅವೇನ್ವಿ ಸೊಲ್ಯೂಷನ್ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ – 2024 ಸಸಿ ನೆಡುವುದು ಮತ್ತು ಸೀಡ್ ಚೆಂಡುಗಳ ವಿತರಣೆಯು ಜೂ.8ನೇ ಶನಿವಾರ 9:30ಕ್ಕೆ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ, ಕೆಲಿಂಜ ಶಾಲೆಯಲ್ಲಿ ನಡೆಯಲಿದೆ.
ಹಳೆ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರರು, ದೇವದಾಸ ರೈ ಮಾಡದಾರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಶಿಕ್ಷಕರು, ದ.ಕ.ಜಿ.ಪಂ.ಹಿ.ಪ್ರಾ.ಶಾಲೆ, ಕೆಲಿಂಜ ಬಿ. ತಿಮ್ಮಪ್ಪ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ನಿರ್ದೇಶಕರು, ಭರತ್ ಕಾರ್ಪೋರೇಷನ್, ಮಂಗಳೂರು ಶ್ರೀ ಭರತ್ ರಾಜ್ ಮುಂಡೋಲಿ, ನಿರ್ದೇಶಕರು, ಅವೇನ್ವಿ ಸೊಲ್ಯೂಷನ್, ಮಂಗಳೂರು ಮಂಜುನಾಥ, ಅಧ್ಯಕ್ಷರು, ಗ್ರಾ. ಪಂ. ವೀರಕಂಬ ಶ್ರೀಮತಿ ಲಲಿತ, ಶಿಕ್ಷಣ ಸಂಯೋಜಕರು ಬಂಟ್ವಾಳ ಶ್ರೀಮತಿ ಪ್ರತಿಮಾ, ಎಸ್.ಡಿ.ಎಂ.ಸಿ, ಅಧ್ಯಕ್ಷರು ಕೆಲಿಂಜ ಶಾಲೆ ಶ್ರೀಮತಿ ಜಯಂತಿ, ಉಪಾಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಕೆಲಿಂಜ ಶಾಲೆ ಎನ್. ಹಮೀದ್ ಜಿ. ಎಸ್, ಕಾರ್ಯದರ್ಶಿ ಹಳೆ ವಿದ್ಯಾರ್ಥಿ ಸಂಘ ಕೆಲಿಂಜ ಶಾಲೆ ಸಂತೋಷ್ ಶೆಟ್ಟಿ ಸೀನಾಜೆ, ಪೋಲಿಸ್ ಹಳೆ ವಿದ್ಯಾರ್ಥಿ ಸಂಘ ಕೆಲಿಂಜ ಶಾಲೆ ಶ್ರೀ ನರೇಶ ರೈ ಕಲ್ಮಲೆ, ಹಳೆ ವಿದ್ಯಾರ್ಥಿ ಸಂಘ ಕೆಲಿಂಜ ಶಾಲೆ ಶ್ರೀ ಮೋಹಿತ್ ಶೆಟ್ಟಿ ಮಾಡದಾರು, ಹಳೆ ವಿದ್ಯಾರ್ಥಿ ಸಂಘ ಕೆಲಿಂಜ ಶಾಲೆ ಶ್ರೀಧರ್ ಗೌಡ ಮೆಸ್ಕಂ, ಪುಣಚ, ಸದಸ್ಯರು, ಗ್ರಾ. ಪಂ. ವೀರಕಂಬ ಸಂದೀಪ್ ಪೂಜಾರಿ, ಸದಸ್ಯರು, ಗ್ರಾ. ಪಂ. ವೀರಕಂಬ ಜಯ ಪ್ರಸಾದ್, ಸದಸ್ಯರು, ಗ್ರಾ. ಪಂ. ವೀರಕಂಬ ಶ್ರೀಮತಿ ಉಮಾವತಿ ಸಪಲ್ಯ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ.