
ಕೇಪು: ಶ್ರೀ ದುರ್ಗಾಪರಮೇಶ್ವರಿ ( ಉಳ್ಳಾಲ್ತಿ ) ಅಮ್ಮನವರ ಕಜಂಬು ಜಾತ್ರೆಯ ಆಜ್ಞೆಯನ್ನು ವಿಟ್ಲ ಅರಮನೆಯ ಅನುವಂಶಿಕ ಮುಕ್ತೇಸರರು , ಎರಡೂರ ಗುರಿಕಾರರು , ಅರ್ಚಕ ವೃಂದ , ಪರಿಚಾರಕರು, ಎರಡೂರ ಗ್ರಾಮಸ್ಥರು ಸೇರಿ ಇಂದು ದೇವಾಲಯದ ಸನ್ನಿಧಿಯಲ್ಲಿ ನೆರವೇರಿಸಿದರು.



ಡಿ.15ರಂದು ಕಲ್ಲಂಗಳ ಮಹಾದ್ವಾರ ದಿಂದ ಬೃಹತ್ ಹೊರೆಕಾಣಿಕೆ ಬಂದು , ಡಿ.16ರಂದು ರಾತ್ರಿ 10.00 ಗಂಟೆಗೆ ಕಜಂಬು ಉತ್ಸವ ನಡೆಯಲಿದೆ . ಡಿ.23ರಂದು ಮಧ್ಯಾಹ್ಯ 1:30ಕ್ಕೆ ಮಲರಾಯ ಮತ್ತು ಪಿಲಿಚಂಡಿ ದೈವಕ್ಕೆ ನೇಮೋತ್ಸವ ನಡೆಯಲಿದ್ದು, ಜಾತ್ರೋತ್ಸವ ಆಜ್ಞೆಯನ್ನು ಇಂದಿನಿಂದ ಪಾರಂಭವಾಗಿದೆ.

ಈ ಸಂದರ್ಭದಲ್ಲಿ ಅರಮನೆಯ ಸದಾಶಿವ ವಿಟ್ಲ ಅರಮನೆ, ಕೃಷ್ಣಯ್ಯ ಅರಮನೆ , ದೇವಾಲಯದ ಪ್ರಧಾನ ಅರ್ಚಕರಾದ ಸೂರ್ಯನಾರಾಯಣ ಕೇಕುನಯರು , ಶ್ರೀನಿವಾಸ ರೈ ಕುಂಡಕೋಳಿ, ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ, ಕೊರಗಪ್ಪ ರೈ ಕಲ್ಲಂಗಳ , ಮುರಳೀಧರ ರೈ ಕೇಪುಗುತ್ತು , ಮಲರಾಯ ದೈವದ ಮಾಣಿ ಪುಷ್ಪಕಾರ ಶೆಟ್ಟಿ , ಪಿಲಿಚಂಡಿ ದೈವದ ಮಾಣಿ ಚಂದ್ರಶೇಖರ , ಪರಿಚಾರಕರು, ಎರಡೂರ ಗ್ರಾಮಸ್ಥರು ಉಪಸ್ಥಿತರಿದ್ದರು.









