- Advertisement -
- Advertisement -





ಕೇಪು: ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ಕೇಪು ಶ್ರೀ ಉಳ್ಳಾಲ್ತಿ ಕ್ಷೇತ್ರದಲ್ಲಿ ಜಾತ್ರೋತ್ಸವ ಡಿ. 16 ರಂದು ನಡೆಯಲಿದ್ದು, ಈ ಕ್ಷೇತ್ರದಲ್ಲಿ ನಡೆಯುವ ವಿಶೇಷ ಕಜಂಬು ಉತ್ಸವ ನಡೆಯುವ ಮಕ್ಕಳ ಸ್ಥಾನಘಟ್ಟದಲ್ಲಿ ಕೇಪು ಶ್ರೀ ದುರ್ಗಾ ಮಿತ್ರ ಸೇವಾ ಸಮಿತಿ ಮೈರ ಇದರ ವತಿಯಿಂದ ಶ್ರಮದಾನ ಕಾರ್ಯ ನಡೆಸಲಾಯಿತು.
ಸತತ 12 ವರ್ಷಗಳಿಂದ ಕೇಪು ಶ್ರೀ ದುರ್ಗಾ ಮಿತ್ರ ಸೇವಾ ಸಮಿತಿ, ಮೈರ ಇದರ ವತಿಯಿಂದ ಈ ಕ್ಷೇತ್ರದಲ್ಲಿ ಜಾತ್ರೋತ್ಸವದ ಸಂದರ್ಭದಲ್ಲಿ ಶ್ರಮದಾನ ಕಾರ್ಯವನ್ನು ಮಾಡಿಕೊಂಡು ಬರಲಾಗುತ್ತಿದೆ. ಅದಲ್ಲದೇ ಮಕ್ಕಳ ಕಜಂಬು ಉತ್ಸವದ ಸಂದರ್ಭದಲ್ಲಿ ಮಕ್ಕಳನ್ನು ಸ್ನಾನಘಟ್ಟದಲ್ಲಿ ಸ್ನಾನ ಮಾಡಿಸುವ ಎಲ್ಲಾ ಸೇವೆಗಳಲ್ಲಿ ಕೇಪು ಶ್ರೀ ದುರ್ಗಾ ಮಿತ್ರ ಸೇವಾ ಸಮಿತಿ, ಮೈರ ಇದರ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಆ ಮೂಲಕ ಈ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಮಾಡಿಕೊಂಡು ಬಂದಿರುತ್ತಾರೆ. ಶ್ರಮದಾನದಲ್ಲಿ ಸೇವಾ ಸಮಿತಿ ಯ ಎಲ್ಲಾ ಸರ್ವ ಸದ್ಯಸರು, ಮಕ್ಕಳು ಭಾಗಿಯಾಗಿದ್ದರು.

- Advertisement -








